alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಬಹಿರಂಗವಾಯ್ತು ವೈರಲ್ ವಿಡಿಯೋದ ಸತ್ಯ

snake

ಹೋಟೆಲ್ ಗ್ರಾಹಕರನ್ನು ಬೆಚ್ಚಿ ಬೀಳಿಸುವಂತಹ ವಿಡಿಯೋ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೋಟೆಲ್ ಕೋಣೆಯಲ್ಲಿ ಅಳವಡಿಸಿದ್ದ ಎಸಿಯಲ್ಲಿ ಆಸರೆ ಪಡೆದಿದ್ದ ಹಾವು, ಅಲ್ಲಿಂದ ಹೊರಬಿದ್ದು ಇಲಿಯನ್ನು ಬೇಟೆಯಾಡುವ ವಿಡಿಯೋ ಅದು.

ವಿಡಿಯೋ ನೋಡಿದವರೆಲ್ಲ ಬೆಚ್ಚಿಬಿದ್ದಿದ್ದಂತೂ ಸುಳ್ಳಲ್ಲ. ಈ ವಿಡಿಯೋವನ್ನು ಮುಂಬೈನ ಹೋಟೆಲ್ ಒಂದರಲ್ಲಿ ಸೆರೆಹಿಡಿಯಲಾಗಿದೆ ಅಂತಾ ಡೇವಿಡ್ ಅಟೆನ್ಬರೋ ಎಂಬಾತ ಟ್ವೀಟ್ ಮಾಡಿದ್ದ. ಅದಕ್ಕೆ 14,000 ರಿಟ್ವೀಟ್ಸ್ ಹಾಗೂ 22,000 ಲೈಕ್ಸ್ ಬಂದಿದೆ.

ಆದ್ರೆ ಆ ವಿಡಿಯೋ ಮಾತ್ರ ಮುಂಬೈ ಹೋಟೆಲ್ ನಲ್ಲಿ ಸೆರೆಹಿಡಿದಿದ್ದಲ್ಲ ಅನ್ನೋದನ್ನು ಟ್ವಿಟ್ಟರ್ ಬಳಕೆದಾರರು ಪತ್ತೆ ಮಾಡಿದ್ದಾರೆ. ಅಸಲಿಗೆ ಈ ಬಗೆಯ ಹೋಟೆಲ್ ಮುಂಬೈನಲ್ಲಿ ಇಲ್ಲವೇ ಇಲ್ಲ. ಅದು ಚೀನಾದಲ್ಲಿ ಸೆರೆಸಿಕ್ಕ ವಿಡಿಯೋ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...