alex Certify
ಕನ್ನಡ ದುನಿಯಾ       Mobile App
       

Kannada Duniya

ಓವರ್ ಟೇಕ್ ಮಾಡಿದ್ದಕ್ಕೆ ಶಾಸಕರ ಪುತ್ರನಿಂದ ಹಲ್ಲೆ

ರಾಜಸ್ಥಾನದ ಬನ್ಸ್ವಾರದ ಬಿಜೆಪಿ ಶಾಸಕರ ಪುತ್ರ, ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಥಳಿಸಿದ್ದಾರೆ. ರಸ್ತೆಯಲ್ಲಿ ಈತ ಕಾರಿನಿಂದ ಇಳಿದು ಥಳಿಸುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದ ನೀರವ್ ಉಪಾಧ್ಯಾಯ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.

ಜೂನ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಥಳಿಸುವ ದೃಶ್ಯಗಳು ಸೆರೆಯಾಗಿವೆ. ಧನ್ಸಿಂಗ್ ರಾವತ್ನ ಪುತ್ರರಾಗಿರುವ ರಾಜ ಅವರ ಕಾರನ್ನು ಮುಂದೆ ಹೋಗಲು ಬಿಟ್ಟಿಲ್ಲ ಎಂದು ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ, ಹೊರಗೆಳೆದು ಹಲ್ಲೆ ನಡೆಸಿದ್ದಾರೆ.
ರಾಜು ಅವರ ಜತೆಗಿದ್ದ ಬೆಂಬಲಿಗರೂ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಏಕಮುಖ ಸಂಚಾರವಿರುವ ರಸ್ತೆಯಲ್ಲಿ ನಾನು ಹೋಗುತ್ತಿದ್ದೆ. ರಾಜು ಅವರಿಗೆ ನನ್ನನ್ನು ಹಿಂದಿಕ್ಕಲು ಸರಿಯಾದ ಸ್ಥಳಾವಕಾಶ ಇರಲಿಲ್ಲ. ಒಂದು ಕಡೆ ನನ್ನನ್ನು ಓವರ್ಟೇಕ್ ಮಾಡಿ, ಅಡ್ಡಗಟ್ಟಿದರು. ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅವರು ಏಳೆಂಟು ಜನ ಇದ್ದರು. ಆ ಬಳಿಕ ಕಾರಿನಿಂದ ಎಳೆದು ಹಲ್ಲೆ ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಆದರೆ, ಇಂತಹ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ಎಸ್ಐ ಚಂದನ್ ಹೇಳಿದ್ದಾರೆ. ಆದರೆ ನೀರವ್, ಎಫ್ಐಆರ್ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾಗಿ ಸುದ್ದಿಗಾರರಿಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...