alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತ ಸೈಕಲ್ ಗಾಗಿ ಕಿತ್ತಾಟ, ಇತ್ತ ಐಷಾರಾಮಿ ಕಾರಿನಲ್ಲಿ ಓಡಾಟ

pratet-yadav

ಲಖ್ನೋ: ಉತ್ತರಪ್ರದೇಶ ರಾಜಕೀಯ ರಂಗ ರಂಗೇರಿದ್ದು, ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆಯೇ, ಸಮಾಜವಾದಿ ಪಕ್ಷದಲ್ಲಿ ಕಲಹ ಜೋರಾಗಿದೆ.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಸೈಕಲ್ ಚಿಹ್ನೆಗಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಕದನಕ್ಕೆ ಇಳಿದಿದ್ದಾರೆ.

ಮುಲಾಯಂ ಮತ್ತೋರ್ವ ಪುತ್ರ ಪ್ರತೀಕ್ ಯಾದವ್ 5 ಕೋಟಿ ರೂ ಮೌಲ್ಯದ ಐಷಾರಾಮಿ ಕಾರ್ ನಲ್ಲಿ ಓಡಾಟ ನಡೆಸಿದ್ದಾರೆ.

ಮುಲಾಯಂ 2 ನೇ ಪತ್ನಿ ಸಾಧನಾ ಗುಪ್ತ ಅವರ ಪುತ್ರನಾಗಿರುವ ಪ್ರತೀಕ್ ಯಾದವ್ 5 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ್ದಾರೆ.

ರಾಜಕೀಯದಿಂದ ದೂರ ಇರುವ ಪ್ರತೀಕ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಜಂಗಢ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರಾದರೂ ಅವಕಾಶ ಸಿಕ್ಕಿರಲಿಲ್ಲ.

ಸೈಕಲ್ ಚಿಹ್ನೆಗಾಗಿ ಅಪ್ಪ, ಮಗನ ನಡುವೆ ಪೈಪೋಟಿ ನಡೆಯುತ್ತಿರುವಾಗ ಮತ್ತೋರ್ವ ಪುತ್ರ 5 ಕೋಟಿ ರೂ. ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...