alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಪ್ರಾಣವನ್ನೂ ಲೆಕ್ಕಿಸದೇ ನೂರಾರು ಜನರನ್ನು ರಕ್ಷಿಸಿದ್ದಾನೆ ಈ ಚಾಲಕ

ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಟ್ಯಾಂಕರ್ ಚಾಲಕನ ಸಮಯಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ. ನರಸಿಂಘ್ಪುರ ಜಿಲ್ಲೆಯಲ್ಲಿ ಆಯಿಲ್ ಟ್ಯಾಂಕರ್ ಚಾಲಕ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೊತ್ತಿ ಉರಿಯುತ್ತಿದ್ದ ಬಂಕ್ ನಿಂದ ಹೊರಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ.

ಸಾಜಿದ್ ಪೆಟ್ರೋಲ್ ಅನ್ ಲೋಡ್ ಮಾಡಲು ಬಂಕ್ ಗೆ ಬಂದಿದ್ದ. ದಿಢೀರನೆ ಆಯಿಲ್ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಂಕ್ ನಲ್ಲಿ ಹಲವಾರು ವಾಹನ ಸವಾರರು ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಕ್ಯೂನಲ್ಲಿದ್ರು. ಅದರ ಜೊತೆಗೆ ಸಾಕಷ್ಟು ಬಂಕ್ ಸಿಬ್ಬಂದಿಯೂ ಇದ್ರು.

ಇನ್ನು ಸ್ವಲ್ಪ ಹೊತ್ತು ಆಯಿಲ್ ಟ್ಯಾಂಕರ್ ಅಲ್ಲೇ ಇದ್ರೆ ಭಾರೀ ಅನಾಹುತವೇ ನಡೆದುಹೋಗುತ್ತಿತ್ತು. ಹಾಗಾಗಿ ತನ್ನ ಪ್ರಾಣವನ್ನೇ ಲೆಕ್ಕಿಸದೇ ಸಾಜಿದ್ ಜನಸಂದಣಿ ಇಲ್ಲದ ಪ್ರದೇಶಕ್ಕೆ ಹೊತ್ತಿ ಉರಿಯುತ್ತಿದ್ದ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಷ್ಟು ಹೊತ್ತಿಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚಾಲಕ ಸಾಜಿದ್ ಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...