alex Certify
ಕನ್ನಡ ದುನಿಯಾ       Mobile App
       

Kannada Duniya

ಈ ‘ಬಾಹುಬಲಿ’ಯನ್ನು ಎತ್ತಿ ಬಿಸಾಡಿದೆ ಆನೆ

‘ಬಾಹುಬಲಿ’ ಪ್ರಭಾಸ್ ಸೊಂಡಿಲ ಮೂಲಕ ಆನೆಯನ್ನು ಹತ್ತುವ ರೀತಿಯಲ್ಲಿ ಸ್ಟಂಟ್ ಮಾಡಲು ಹೋದ ಭೂಪನೊಬ್ಬ ಸೊಂಟ ಮುರಿದುಕೊಂಡ ಘಟನೆ ಕೇರಳದಲ್ಲಿ ನಡೆದಿದೆ.

ತೋಡಪುಳದಲ್ಲಿ ಯುವಕನೊಬ್ಬ ಪ್ರಭಾಸ್ ರೀತಿ ಆನೆ ಮೇಲೆ ಹತ್ತಲು ಹೋಗಿದ್ದ ಸಂದರ್ಭದಲ್ಲಿ ಸೊಂಡಿಲಿನಿಂದ ಆನೆ ಎತ್ತಿ ಬಿಸಾಕಿದ್ದು, ದೂರದವರೆಗೂ ಹೋಗಿ ಬಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ, ಮಾವುತನಿಲ್ಲದ ಆನೆಯ ಬಳಿ ಹೋಗಿ ಸಾಹಸ ಪ್ರದರ್ಶಿಸಲು ಮುಂದಾಗಿದ್ದು, ಪೆಟ್ಟು ಮಾಡಿಕೊಂಡಿದ್ದಾನೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...