alex Certify
ಕನ್ನಡ ದುನಿಯಾ       Mobile App
       

Kannada Duniya

ಸೆರೆಯಾಯ್ತು ಜನನಿಬಿಡ ಪ್ರದೇಶದಲ್ಲೇ ನಡೆದ ಭೀಕರ ದೃಶ್ಯ

ಅಮೃತಸರ: ಜಲಂಧರ್ ನಲ್ಲಿ ಇತ್ತೀಚೆಗಷ್ಟೇ ಹಿಂದೂ ಸಂಘಟನೆಯ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಮಾಸುವ ಮೊದಲೇ, ಅಮೃತಸರ್ ನಲ್ಲಿ ಮತ್ತೊಂದು ಘಟನೆ ಮರುಕಳಿಸಿದೆ.

ಆಘಾತಕಾರಿ ಘಟನೆಯಲ್ಲಿ ಮುಸುಕುಧಾರಿಗಳಾಗಿದ್ದ ದುಷ್ಕರ್ಮಿಗಳು ಹಿಂದೂ ಸಂಘರ್ಷ ಸೇನೆಯ ಮುಖಂಡ ವಿಪಿನ್ ಕುಮಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಅಮೃತಸರ ಭರತ್ ನಗರದ ಜನನಿಬಿಡ ಮಾರ್ಕೇಟ್ ಪ್ರದೇಶದಲ್ಲಿ ವಿಪಿನ್ ಕುಮಾರ್, ಮನೆಗೆ ತೆರಳಲು ಬೈಕ್ ಬಳಿ ಹೋಗಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ದುಷ್ಕರ್ಮಿಗಳು, ಸಮೀಪದಲ್ಲೇ 5 -6 ಸುತ್ತು ಗುಂಡು ಹಾರಿಸಿದ್ದಾರೆ. ದೇಹದ ವಿವಿಧ ಭಾಗಗಳಿಗೆ ಗುಂಡು ತಗುಲಿ ವಿಪಿನ್ ಕುಮಾರ್ ಮೃತಪಟ್ಟಿದ್ದಾರೆ.

ಘಟನೆಯ ದೃಶ್ಯಾವಳಿಗಳೆಲ್ಲಾ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...