alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಶಂಸೆಗೆ ಪಾತ್ರವಾಗಿದೆ CRPF ಯೋಧರ ಈ ಕಾರ್ಯ

ದಾಂತೇವಾಡ: ನಕ್ಸಲ್ ಪೀಡಿತ ಪ್ರದೇಶವಾಗಿರುವ ದಾಂತೇವಾಡದಲ್ಲಿ ಸಿ.ಆರ್.ಪಿ.ಎಫ್. ಯೋಧರು ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ಬರೋಬ್ಬರಿ 7 ಕಿಲೋ ಮೀಟರ್ ಸ್ಟ್ರೆಚರ್ ನಲ್ಲಿ ಹೊತ್ತು ಯೋಧರು ಸಾಗಿದ್ದಾರೆ.

ದಾಂತೇವಾಡ ಜಿಲ್ಲೆಯ ಬಸ್ತಾರ್ ದಟ್ಟ ಕಾಡಿನ ಗ್ರಾಮವೊಂದರ ಮಹಿಳೆಗೆ ಜ್ವರ ಕಾಣಿಸಿಕೊಂಡಿದೆ. ಆಕೆಯ ಹಿರಿಯ ಮಗನಿಂದ ಯೋಧರಿಗೆ ಮಾಹಿತಿ ತಲುಪಿದೆ.

ಯೋಧರು ಒಂಟಿ ಗುಡಿಸಲಿನ ಮನೆಗೆ ಹೋಗಿ ಗಮನಿಸಿದಾಗ, ಮಹಿಳೆ ಜ್ವರದಿಂದ ಮಲಗಿರುವುದು, ಬಳಿಯಲ್ಲೇ 2 ತಿಂಗಳ ಶಿಶು ಇರುವುದು ಕಂಡಿದೆ.

ಮಹಿಳೆ ಇದ್ದ ಸ್ಥಳಕ್ಕೆ ಆಂಬುಲೆನ್ಸ್ ತಲುಪಲು ಸಾಧ್ಯವಿಲ್ಲದ ಕಾರಣ, ಯೋಧರು, ಮರ, ಬಿದಿರು ಬಳಸಿದ ಸ್ಟ್ರೆಚರ್ ರೆಡಿಮಾಡಿಕೊಂಡು ಅದರಲ್ಲೇ ಮಹಿಳೆಯನ್ನು ಹೊತ್ತು ಕಾಡಿನ ದಾರಿಯಲ್ಲಿ ಸಾಗಿದ್ದಾರೆ.

ಗುಡ್ಡ, ನದಿಯನ್ನು ದಾಟಿ 7 ಕಿಲೋಮೀಟರ್ ಹೊತ್ತುಕೊಂಡು ಹೋಗಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಬಳಿಕ ಮಹಿಳೆ ಚೇತರಿಸಿಕೊಂಡಿದ್ದಾರೆ.

ಈ ಸ್ಥಳಕ್ಕೆ ಆಂಬುಲೆನ್ಸ್, ವೈದ್ಯರ ವ್ಯವಸ್ಥೆ ಕಲ್ಪಿಸುವಂತೆ ಯೋಧರು ಹೇಳಿದ್ದಾರೆ. ಯೋಧರು ಬುಡಕಟ್ಟು ಮಹಿಳೆಯನ್ನು ರಕ್ಷಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...