alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗಳ ಮದುವೆಗೆ ಸಾಕ್ಷಿಯಾದ್ರು 5 ಸಾವಿರ ಮಂದಿ..!

dogwedding12 (1)

ಐಷಾರಾಮಿ ಮದುವೆಗೆ ಭಾರತ ಹೆಸರುವಾಸಿ. ಭಾರತದಲ್ಲಿ ಸಾಮಾನ್ಯವಾಗಿ ಎಲ್ಲ ಮದುವೆಗಳೂ ಅದ್ಧೂರಿಯಾಗಿ ನಡೆಯುತ್ತವೆ. ಮನುಷ್ಯರ ಮದುವೆಯನ್ನು ಸಂಭ್ರಮದಿಂದ, ಸಿಕ್ಕಾಪಟ್ಟೆ ಖರ್ಚು ಮಾಡಿ ಮಾಡುವುದು ಕಾಮನ್. ಆದ್ರೀಗ ಪ್ರಾಣಿಗಳ ವಿವಾಹವನ್ನೂ ಅದ್ಧೂರಿಯಾಗಿ ಮಾಡಲಾಗ್ತಾ ಇದೆ.

ಇದಕ್ಕೆ ಉತ್ತರ ಪ್ರದೇಶದ ಕೌಶಿಂಬಿ ಜಿಲ್ಲೆ ಉತ್ತಮ ಉದಾಹರಣೆ. ಅಲ್ಲಿ ನಾಯಿ ಹಾಗೂ ಹೆಣ್ಣು ನಾಯಿಯ ವಿವಾಹ ಮಾಡಲಾಯ್ತು. ಮದುವೆಗೆ 5 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದರು. ಹಿಂದು ಪದ್ಧತಿಯಂತೆ ಮದುವೆ ಮಾಡಲಾಯ್ತು. ಹಾಡು, ಕುಣಿತದೊಂದಿಗೆ ಮದುವೆ ಮನೆಗೆ ಬಂತು ಬಾರಾತ್. ಜನರೆಲ್ಲ ಕುಣಿದು ಕುಪ್ಪಳಿಸಿದ್ರೆ ನಾಯಿ ಮಾತ್ರ ಕಾರ್ ನಲ್ಲಿ ಬಂದಿತ್ತು. ನಂತ್ರ ಮಧುಮಗಳನ್ನು ಅದ್ಧೂರಿಯಾಗಿಯೇ ಗಂಡನ ಮನೆಗೆ ಕಳುಹಿಸಿಕೊಡಲಾಯ್ತು.

ಜಂಗ್ ಬಹಾದೂರ್ ಹಾಗೂ ತ್ರಿಪಾಠಿ ಉತ್ತಮ ಸ್ನೇಹಿತರು. ಒಂದು ದಿನ ಜಂಗ್ ಬಹಾದೂರ್ ತನ್ನ ನಾಯಿಯೊಂದಿಗೆ ತ್ರಿಪಾಠಿ ಮನೆಗೆ ಬಂದಿದ್ದರು. ಮಾತಿನ ಮಧ್ಯೆ ತ್ರಿಪಾಠಿ ತನ್ನ ಮನೆಯ ನಾಯಿಗೊಂದು ಮದುವೆ ಮಾಡಬೇಕು ಎಂದಿದ್ದಾರೆ. ತಮಾಷೆಯ ಈ ಮಾತನ್ನು ಗಂಭೀರವಾಗಿ ಪರಿಗಣಿಸಲಾಯ್ತು. ಜಂಗ್ ಬಹಾದೂರ್ ತನ್ನ ಮನೆಯ ಹೆಣ್ಣು ನಾಯಿಯನ್ನು ತ್ರಿಪಾಠಿ ಮನೆಯ ಗಂಡು ನಾಯಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...