alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿನಲ್ಲಿ ಪ್ರತ್ಯಕ್ಷವಾದ ಹೊಸ ಅತಿಥಿ ನೋಡಿ ವಿದ್ಯಾರ್ಥಿಗಳು ಕಂಗಾಲು

ಅಲಹಾಬಾದ್ ನ ಶ್ಯಾಮ್ ಪ್ರಸಾದ್ ಮುಖರ್ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬೃಹತ್ ಹೆಬ್ಬಾವೊಂದನ್ನು ಸೆರೆಹಿಡಿಯಲಾಗಿದೆ. 12 ಅಡಿ ಉದ್ದದ ಈ ಹಾವು ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ವಿಶೇಷ ಅಂದ್ರೆ ಹೆಬ್ಬಾವು ಹಿಡಿಯಲು ತಜ್ಞರನ್ನು ಕರೆಸಿಲ್ಲ.

ಕಾಲೇಜಿನ ಪ್ರೊಫೆಸರ್ ಒಬ್ಬರು ಇದನ್ನು ಸೆರೆಹಿಡಿದಿದ್ದಾರೆ. ನಂತರ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಾಲೇಜು ಆವರಣದಲ್ಲಿ ಹಾವು ಪ್ರತ್ಯಕ್ಷವಾಗಿರುವ ಬಗ್ಗೆ ವಿದ್ಯಾರ್ಥಿಯೊಬ್ಬ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಎನ್ ಬಿ ಸಿಂಗ್ ಅವರಿಗೆ ಕರೆ ಮಾಡಿ ತಿಳಿಸಿದ್ದ.

ಆ ಹಾವು ಬರೋಬ್ಬರಿ 40 ಕೆಜಿ ತೂಕವಿತ್ತು. ಹಾಗಾಗಿ ಸಾಕಷ್ಟು ಕಸರತ್ತು ಮಾಡಿ ಅದನ್ನು ಹಿಡಿಯಲಾಗಿದೆ. ಈವರೆಗೆ ಪ್ರೊಫೆಸರ್ ಎನ್ ಬಿ ಸಿಂಗ್ ಒಂದು ಡಜನ್ ಗೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರಂತೆ. ಅವು ಸುರಕ್ಷಿತವಾಗಿ ಕಾಡು ಸೇರಬೇಕು ಎಂಬುದೇ ತಮ್ಮ ಉದ್ದೇಶ ಎನ್ನುತ್ತಾರೆ ಪ್ರೊಫೆಸರ್.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...