alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ ಎದುರಾಳಿಗಳನ್ನು ಮಂಗಗಳೆಂದ ಕಾಟ್ಜು

katju-loveಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ ಮಾರ್ಕಾಂಡೇಯ ಕಾಟ್ಜು, ಜಯಲಲಿತಾರನ್ನು ಸಿಂಹಿಣಿ ಎಂದು, ಅವರ ಎದುರಾಳಿಗಳನ್ನೆಲ್ಲ ಮಂಗಗಳೆಂದು ಕರೆದಿದ್ದಾರೆ.

ಅಷ್ಟೇ ಅಲ್ಲ ಯುವಕರಾಗಿದ್ದಾಗ ತಮಗೂ ಜಯಲಲಿತಾರ ಮೇಲೆ ಪ್ರೀತಿ ಹುಟ್ಟಿತ್ತು ಅನ್ನೋ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಈಗಲೂ ಜಯಲಲಿತಾರ ವ್ಯಕ್ತಿತ್ವ ಅತ್ಯಾಕರ್ಷಕ ಎಂದಿರುವ ಕಾಟ್ಜು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತಾ ಹಾರೈಸಿದ್ದಾರೆ.

ಜಯಲಲಿತಾರ ಜೊತೆ ಕುಳಿತಿರುವ ಫೋಟೋ ಒಂದನ್ನು ಅಪ್ ಲೋಡ್ ಮಾಡಿರುವ ಕಾಟ್ಜು ‘ಶೇರ್ ಔರ್ ಶೇರ್ನಿ’ ಅಂತಾ ಟೈಟಲ್ ಕೂಡ ಕೊಟ್ಟಿದ್ದಾರೆ. ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಜಯಲಲಿತಾರಿಗೂ ಗೊತ್ತಿರಲಿಲ್ಲ, ಇದು ಹಿಂದಿರುಗಿಸಲಾಗದಂತಹ ಪವಿತ್ರ ಪ್ರೇಮ ಅಂತಾ ಮಾರ್ಕಾಂಡೇಯ ಕಾಟ್ಜು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...