alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಜೊತೆ ಕುಣಿದು ಕುಪ್ಪಳಿಸಿದ ಶಾಸಕನ ವಿಡಿಯೋ ಬಹಿರಂಗ

bardance

ರೂರ್ಕಿ: ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸಮಾರಂಭಗಳಲ್ಲಿ ಕೆಲವೊಮ್ಮೆ ಲಜ್ಜೆಗೆಟ್ಟ ವರ್ತನೆ ತೋರಿ ಇದು ಬಹಿರಂಗವಾದ ಬಳಿಕ ನುಣುಚಿಕೊಳ್ಳಲು ಯತ್ನಿಸುವುದುಂಟು. ಈಗ ಅಂತಹ ವಿಡಿಯೋ ಒಂದು ಬಹಿರಂಗವಾಗಿದೆ.

ಉತ್ತರಾಖಂಡ್ ನ ವಕ್ಬ್ ವಿಕಾಸ್ ಬೋರ್ಡ್ ಗೆ ರಾವ್ ಸಜ್ಜಾದ್ ಎಂಬವರ ನೇಮಕವಾಗಿದ್ದು, ಅವರನ್ನು ಅಭಿನಂದಿಸಲು ಸಾರ್ವಜನಿಕ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಬಂದವರಿಗೆ ಮನರಂಜನೆಗೆ ಡ್ಯಾನ್ಸರ್ ಗಳನ್ನು ಕರೆಸಲಾಗಿತ್ತು.

ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾನ್ಪುರದ ಕಾಂಗ್ರೆಸ್ ಶಾಸಕ ಕುನ್ವರ್ ಪ್ರಣಾವ್ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಈ ವೇಳೆ ಅವರ ಕೈಯಲ್ಲಿ ರಿವಾಲ್ವರ್ ಸಹ ಇತ್ತೆಂದು ಹೇಳಲಾಗಿದೆ. ಡ್ಯಾನ್ಸ್ ಮಾಡುತ್ತಿದ್ದ ಯುವತಿಯ ಮೇಲೆ ಕೆಲವರು ನೋಟುಗಳನ್ನು ತೂರಿದ್ದು, ಈ ದೃಶ್ಯಗಳನ್ನು ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ. ಶಾಸಕನ ಲಜ್ಜೆಗೇಡಿ ವರ್ತನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...