alex Certify
ಕನ್ನಡ ದುನಿಯಾ       Mobile App
       

Kannada Duniya

5 ನಿಮಿಷದಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಪ್ರಧಾನಿ ಭೇಟಿಯಾಗುವ ಯೋಗ

want-to-meet-prime-minister-modi-answer-the-online-quizಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕೆ..? ಹಾಗಾದ್ರೆ mygov.in ವೆಬ್ ಸೈಟ್ ಗೆ ಲಾಗಿನ್ ಆಗಿ ಅಲ್ಲಿರುವ 20 ಪ್ರಶ್ನೆಗಳಿಗೆ 5 ನಿಮಿಷದಲ್ಲಿ ಸರಿಯಾಗಿ ಉತ್ತರಿಸಿದರೆ ಆ ಯೋಗ ನಿಮ್ಮದಾಗಲಿದೆ.

ಹೌದು, ಎನ್.ಡಿ.ಎ. ಸರ್ಕಾರದಲ್ಲಿನ ಅಭಿವೃದ್ದಿ ಕಾರ್ಯಕ್ರಮಗಳ ಕುರಿತಂತೆ ಹಲವು ಪ್ರಶ್ನೆಗಳು ಈ ವೆಬ್ ಸೈಟ್ ನಲ್ಲಿದ್ದು, ಇದಕ್ಕೆ ನಾಲ್ಕು ಆಯ್ಕೆಗಳೂ ಇರುತ್ತವೆ. ಆ  ನಾಲ್ಕು ಉತ್ತರಗಳ ಪೈಕಿ ಸರಿ ಉತ್ತರಕ್ಕೆ ಟಿಕ್ ಮಾಡಬೇಕಾಗುತ್ತದೆ. 5 ನಿಮಿಷದಲ್ಲಿ 20 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರಿಗೆ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಗುತ್ತದಲ್ಲದೇ ಅವರ ಸಹಿಯಿರುವ ಸರ್ಟಿಫಿಕೇಟ್ ಕೂಡಾ ನೀಡಲಾಗುತ್ತದೆ.

ಒಬ್ಬರಿಗಿಂತ ಹೆಚ್ಚು ಮಂದಿ ಸರಿಯುತ್ತರ ನೀಡಿದ ಪಕ್ಷದಲ್ಲಿ ಯಾರು ಅತಿ ಕಡಿಮೆ ಅವಧಿಯಲ್ಲಿ ಉತ್ತರಿಸಿರುತ್ತಾರೋ ಅಂತವರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಶ್ನೆಗಳೂ ಕಠಿಣವಾಗಿರಲಿದ್ದು, ಯೋಚಿಸಿ ತಾಳ್ಮೆಯಿಂದ ಉತ್ತರ ನೀಡಿದರೆ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ನಿಮ್ಮದಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...