alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿಕೊಳ್ಳಬೇಕೇ? ಹಾಗಿದ್ರೆ ಸಿಬಿಐಗೆ ಕರೆ ಮಾಡಿ ಎಂದ ಕಾರ್ತಿ

INX ಮೀಡಿಯಾ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ 48 ವರ್ಷದ ಕಾರ್ತಿ ಚಿದಂಬರಂರನ್ನು ಮಾರ್ಚ್ 24 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ತಿ ಚಿದಂಬರಂ ರನ್ನು ದೆಹಲಿಯ ತಿಹಾರ್ ಜೈಲಿಗೆ ಕರೆದೊಯ್ಯುವ ಮುನ್ನ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಯಾರಾದರೂ ತೂಕ ಇಳಿಸಿಕೊಳ್ಳಬೇಕೆಂದರೆ ಸಿಬಿಐಗೆ ಕರೆ ಮಾಡುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.

ಸಿಬಿಐ ವಶದಲ್ಲಿದ್ದ ವೇಳೆ ತಮಗೆ ಅಲ್ಪ ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿತ್ತು.ಎಂದು ಆರೋಪಿಸಿದ ಅವರು, ಇದರಿಂದಾಗಿ ತಮ್ಮ ತೂಕದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಉಡುಪುಗಳು ಸಡಿಲವಾಗುತ್ತಿವೆ ಎಂದಿದ್ದಾರೆ. ಇದೇ ವೇಳೆ ತಿಹಾರ್ ಜೈಲಿನಲ್ಲಿ ತಮಗೆ ಬಾತ್ ರೂಂ ಸೌಲಭ್ಯ ಹೊಂದಿರುವ ಪ್ರತ್ಯೇಕ ಸೆಲ್ ಒದಗಿಸಬೇಕೆಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು.

ತಮ್ಮ ತಂದೆ ಕೇಂದ್ರದ ಮಾಜಿ ಸಚಿವರಾಗಿದ್ದು, ಅವರು ತೆಗೆದುಕೊಂಡ ಕೆಲವು ನಿರ್ಧಾರದಿಂದ ತೊಂದರೆಗೀಡಾದವರು ಜೈಲಿನಲ್ಲಿ ತಮ್ಮ ಮೇಲೆ ಆಕ್ರಮಣ ನಡೆಸಬಹುದೆಂಬ ಭೀತಿ ವ್ಯಕ್ತಪಡಿಸಿದರು. ಆದರೆ ಪ್ರತ್ಯೇಕ ಸೆಲ್ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಕಾರ್ತಿ ಚಿದಂಬರಂ ಅವರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...