alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಮದ್ಯ ಪ್ರಿಯರು ಕಟ್ಟಬೇಕಾಗುತ್ತೆ ಈ ತೆರಿಗೆ

ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಈಗಾಗಲೇ ಮದ್ಯ ಬಲು ದುಬಾರಿ ಎಂದು ಗೊಣಗುತ್ತಿದ್ದವರಿಗೆ ಮತ್ತೊಂದು ಹೊರೆ ಬೀಳುವ ಸಾಧ್ಯತೆ ಇದೆ.

ಹೌದು…! ರಾಜಸ್ಥಾನ ಸರ್ಕಾರ ಮದ್ಯದ ಮೇಲೆ ಗೋ ತೆರಿಗೆಯನ್ನು ವಿಧಿಸಲು ಚಿಂತನೆ ನಡೆಸಿದೆ. ನೀವು ಖರೀದಿಸುವ ಮದ್ಯಕ್ಕೆ ಇತರೆ ತೆರಿಗೆ ಜೊತೆಗೆ ಗೋ ತೆರಿಗೆಯನ್ನೂ ಕಟ್ಟಬೇಕಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ಗೋ ಅಭಿವೃದ್ಧಿಗೆ ಬಳಸಲಾಗುತ್ತದೆ.

ಪತ್ರಿಕೆಯೊಂದರ ವರದಿ ಪ್ರಕಾರ, ರಾಜಸ್ಥಾನ ಸರ್ಕಾರದಿಂದ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿದ ನಂತರ ಹಣಕಾಸು ಇಲಾಖೆ ಎಷ್ಟು ಪ್ರಮಾಣದಲ್ಲಿ ತೆರಿಗೆ ವಿಧಿಸಬೇಕೆಂಬುದನ್ನು ನಿರ್ಧರಿಸುತ್ತದೆ.

ಈಗಾಗಲೇ ಸ್ಟಾಂಪ್ ಡ್ಯೂಟಿ ಮೇಲೆ ಶೇ. 10 ರಷ್ಟು ಅಧಿಕ ಹಣವನ್ನು ಪಡೆಯಲಾಗುತ್ತಿದೆ, ಈ ಹಣವನ್ನು ಗೋ ಸಂರಕ್ಷಣೆಗೆ ಬಳಸಲಾಗುತ್ತಿದೆ. ಇದೇ ರೀತಿ ಮದ್ಯದ ಮೇಲೂ ಹೆಚ್ಚು ಹಣ ಸಂಗ್ರಹಿಸಿ, ಇದರಿಂದ ಸಂಗ್ರಹವಾದ ಹಣವನ್ನು ಇದೇ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...