alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೆಸ್ಟೋರೆಂಟ್ ನಲ್ಲಿ ಬ್ರೆಡ್ ಜೊತೆಗೆ ಫ್ರೀಯಾಗಿ ಸಿಗುತ್ತೆ ಇಲಿ!

bread

ವೀಕೆಂಡ್ ನಲ್ಲಿ ಒಂದೊಳ್ಳೆ ಊಟ ಮಾಡೋಣ ಅಂದ್ಕೊಂಡು ಅಮೃತಾ ಶಿವಕುಮಾರ್ ಮತ್ತಾಕೆಯ ಸಹೋದರ ಹರೀಶ್ ಇಬ್ಬರೂ ಮುಂಬೈನ ಹೋಟೆಲ್ ಗೆ ತೆರಳಿದ್ರು. ಬಾಂದ್ರಾದಲ್ಲಿರುವ ಸ್ಮೋಕ್ ಹೌಸ್ ಡೆಲಿ ಎಂಬ ಫೇಮಸ್ ಹೋಟೆಲ್ ಅದು.

ತಿನಿಸುಗಳನ್ನು ಆರ್ಡರ್ ಮಾಡ್ತಿದ್ದಂತೆ ಕಾಂಪ್ಲಿಮೆಂಟರಿಯಾಗಿ ಇಬ್ಬರಿಗೂ ಬ್ರೆಡ್ ಬಾಸ್ಕೆಟ್ ಒಂದನ್ನು ಕೊಡಲಾಯ್ತು. ಅದರಲ್ಲಿದ್ದ ಒಂಚೂರು ಬ್ರೆಡ್ ಅನ್ನು ಹರೀಶ್ ತೆಗೆದುಕೊಂಡಿದ್ದ. ತಾನು ಟೇಸ್ಟ್ ಮಾಡೋಣ ಅಂದ್ಕೊಂಡ ಅಮೃತಾಗೆ ಬಾಸ್ಕೆಟ್ ನಲ್ಲಿ ಏನೋ ಓಡಾಡಿದಂತೆ ಕಂಡಿತ್ತು.

ಕೊನೆಗೆ ವೇಯ್ಟರ್ ನ ಕರೆಸಲಾಯ್ತು. ಬ್ರೆಡ್ ಬಾಸ್ಕೆಟ್ ನಲ್ಲಿ ಇಲಿಯೊಂದು ಆರಾಮಾಗಿ ಓಡಾಡಿಕೊಂಡಿತ್ತು. ಆಗ್ಲೇ ಒಂದು ಚೂರು ಬ್ರೆಡ್ ತಿಂದುಬಿಟ್ಟಿದ್ದ ಹರೀಶ್ ಗೆ ವಾಂತಿ ಬರೋದೊಂದು ಬಾಕಿ. ಕೂಡಲೇ ಫ್ಯಾಮಿಲಿ ಡಾಕ್ಟರ್ ಬಳಿ ಹೋಗಿ ಹರೀಶ್ ಏನೂ ಅನಾಹುತ ಆಗದಂತೆ ಔಷಧ ತೆಗೆದುಕೊಂಡಿದ್ದಾನೆ.

ರೆಸ್ಟೋರೆಂಟ್ ಮ್ಯಾನೇಜರ್ ಇವರ ಬಳಿ ಕ್ಷಮೆ ಕೇಳಿದ್ರು. ಕೊನೆಗೆ ಇಬ್ಬರೂ ಹೋಟೆಲ್ ಸಹವಾಸ ಸಾಕು ಅಂತಾ ಅಲ್ಲಿಂದ ಹೊರಬಿದ್ರು. ಹೋಟೆಲ್ ನ ಹಿರಿಯ ಅಧಿಕಾರಿಗಳು ಕೂಡ ಅಮೃತಾ ಹಾಗೂ ಹರೀಶ್ ಬಳಿ ಕ್ಷಮೆ ಕೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸೋದಾಗಿ ಭರವಸೆ ನೀಡಿದ್ದಾರೆ. ಆದ್ರೆ ರೆಸ್ಟೋರೆಂಟ್ ನ ರೆಗ್ಯುಲರ್ ಗ್ರಾಹಕರಾಗಿದ್ದ ಅಮೃತಾ ಹಾಗೂ ಹರೀಶ್ ಮಾತ್ರ ಇನ್ನೂ ಇಲಿ ಕೊಟ್ಟ ಶಾಕ್ ನಿಂದ ಚೇತರಿಸಿಕೊಂಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...