alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಹೆಚ್ಚು ಹೊತ್ತು ಟಾಯ್ಲೆಟ್ ಬಳಸಿದ್ದಕ್ಕೆ ವ್ಯಕ್ತಿಯ ಹತ್ಯೆ

ಮುಂಬೈನ ವಡಾಲಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಹೆಚ್ಚು ಹೊತ್ತು ಟಾಯ್ಲೆಟ್ ಉಪಯೋಗಿಸಿದ ಅನ್ನೋ ಕಾರಣಕ್ಕೆ 59 ವರ್ಷದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಫೂಲ್ಚಂದ್ ಯಾದವ್ ಮೃತ ವ್ಯಕ್ತಿ. ಫೂಲ್ ಚಂದ್ ಯಾದವ್ ನನ್ನು ಕೊಲೆ ಮಾಡಿದ ಆರೋಪವನ್ನ ಶಕೀರ್ ಅಲಿ ಶೇಖ್ ಎದುರಿಸ್ತಿದ್ದಾನೆ.

ಸಾರ್ವಜನಿಕ ಶೌಚಾಲಯವನ್ನ ಹೆಚ್ಚು ಹೊತ್ತು ಫೂಲ್ ಚಂದ್ ಉಪಯೋಗಿಸಿದ್ದರಂತೆ. ಈ ಸಂದರ್ಭದಲ್ಲಿ ಫೂಲ್ಚಂದ್ ರನ್ನ ಹೊರಬರುವಂತೆ ಶಕೀರ್ ಕೇಳಿದ್ದಾನೆ. ಆದ್ರೆ ಫೂಲ್ ಚಂದ್ ಬೇಗನೆ ಹೊರಬಂದಿಲ್ಲ. ಈ ಕಾರಣಕ್ಕೆ ಫೂಲ್ ಚಂದ್ ಬಂದ ಮೇಲೆ ಶಕೀರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲಿದ್ದ ಸ್ಥಳೀಯರು ಆನಂತರದಲ್ಲಿ ಜಗಳವನ್ನು ಬಿಡಿಸಿದ್ದಾರೆ.

ಆನಂತರದಲ್ಲಿ ನಿತ್ಯ ಕರ್ಮವನ್ನು ಮುಗಿಸಿಕೊಂಡು ಬಂದ ಶಕೀರ್ ಮತ್ತೆ ಫೂಲ್ಚಂದ್ ಅವರ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಫೂಲ್ ಚಂದ್ರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರು ಅಷ್ಟರಲ್ಲಾಗ್ಲೇ ಫೂಲ್ ಚಂದ್ ಸಾವನ್ನಪ್ಪಿಬಿಟ್ಟಿದ್ದರು.

ಫೂಲ್ ಚಂದ್ ಸಾವಿಗೆ ಆತನ ಮನೆಯವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ವಡಾಲಾ ಸುತ್ತಮುತ್ತ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇರೋದೇ ಇಂತಹ ಘಟನೆಗಳಿಗೆ ಕಾರಣ ಅನ್ನೋದು ಸಾರ್ವಜನಿಕರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...