alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಒಮ್ಮೆ ಪರಿಶೀಲಿಸಿಕೊಳ್ಳಿ

ಭಾರತ ಚುನಾವಣಾ ಆಯೋಗದ ಅನುಸಾರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2019 ನ್ನು ಈಗಾಗಲೇ ಕೈಗೊಂಡಿದ್ದು, ಈ ಸಂಬಂಧ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು/ಹೆಸರನ್ನು ಸೇರಿಸಲು/ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ಬಿ.ಎಲ್.ಓ. ಗಳು ಮನೆ-ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಕೋರಿದೆ.

ಬಿ.ಎಲ್.ಓ. ಅಧಿಕಾರಿಗಳು ಆಗಸ್ಟ್ 10 ರವರೆಗೆ ಮನೆಗೆ ಭೇಟಿ ನೀಡಲಿದ್ದು, ಜನವರಿ 1, 2018 ಕ್ಕೆ 18 ವರ್ಷ ವಯೋಮಾನ ತುಂಬಿರುವ ಯುವಕ-ಯುವತಿಯರು ತಮ್ಮ ಹೆಸರುಗಳನ್ನು ಚುನಾವಣಾ ಪರಿಷ್ಕರಣ ಪಟ್ಟಿಗೆ ನೋಂದಾಯಿಸಿಕೊಳ್ಳಬಹುದು ಹಾಗೂ ಜನವರಿ 1, 2019 ರೊಳಗೆ 18 ವರ್ಷ ವಯೋಮಾನ ತುಂಬುವ ಯುವಕ-ಯುವತಿಯರು ಹೊಸದಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು.

ಚುನಾವಣಾ ಪರಿಷ್ಕರಣ ಪಟ್ಟಿಯಲ್ಲಿರುವ ಸಾರ್ವಜನಿಕರು ಮನೆಯನ್ನು ಸ್ಳಳಾಂತರಿಸಿದ್ದರೆ ಅಥವಾ ಮರಣ ಹೊಂದಿದ್ದಲ್ಲಿ ಅಂತಹವರ ಮಾಹಿತಿಯನ್ನು ಮನೆಗೆ ಭೇಟಿ ನೀಡುವ ಬಿ.ಎಲ್.ಓ. ಅಧಿಕಾರಿಗಳಿಗೆ ನೀಡುವ ಮೂಲಕ ಮತದಾರರ ಪಟ್ಟಿಯಿಂದ ಅವರ ಹೆಸರಗಳನ್ನು ತೆಗೆದುಹಾಕಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ಎರಡು ಸಲ ದಾಖಲಾಗಿದ್ದರೆ, ಅಥವಾ ಪುನರಾವರ್ತನೆಯಾಗಿದ್ದರೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶವಿದೆ.

ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸಲು ಅಥವಾ ತೆಗೆದುಹಾಕಲು ಬಿ.ಎಲ್.ಓ. ಗಳಲ್ಲಿ ಮನವಿ ಮಾಡುವಂತೆ ತಿಳಿಸಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರೀಕ್ಷಿಸಲು ಚುನಾವಣಾ ಆಯೋಗದ ವೆಬ್‍ಸೈಟ್ ceokarnataka.kar.nic.in ಅನ್ನು ವೀಕ್ಷಿಸಬಹುದಾಗಿದೆ ಅಥವಾ ಚುನಾವಣಾ Chunawana APP ಅನ್ನು ಬಳಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...