alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ಮತದಾರರಿಗೆ ಬಿಜೆಪಿ ಮುಖಂಡನ ಧಮ್ಕಿ

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡ ರಂಜಿತ್ ಕುಮಾರ್ ಶ್ರೀವಾಸ್ತವ ಮುಸ್ಲಿಂ ಮತದಾರರಿಗೆ ಧಮ್ಕಿ ಹಾಕಿದ್ದಾರೆ. ನನ್ನ ಪತ್ನಿಗೆ ಮತ ಹಾಕಿ, ಇಲ್ಲದೇ ಹೋದಲ್ಲಿ ಹಿಂದೆಂದೂ ಕಂಡಿರದಂತಹ ಸಂಕಷ್ಟಗಳು ಎದುರಾಗುತ್ತವೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ರಂಜಿತ್ ಕುಮಾರ್ ಬಿಜೆಪಿ ಕೌನ್ಸಿಲರ್ ಆಗಿದ್ದಾರೆ. ಅವರ ಪತ್ನಿ ಶಶಿ ಶ್ರೀವಾಸ್ತವ ಇದೇ ತಿಂಗಳು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಂಜಿತ್, ಉತ್ತರ ಪ್ರದೇಶದ ಇಬ್ಬರು ಸಚಿವರ ಸಮ್ಮುಖದಲ್ಲೇ ಈ ರೀತಿ ಧಮ್ಕಿ ಹಾಕಿದ್ದಾರೆ.

ಇದು ಸಮಾಜವಾದಿ ಪಕ್ಷದ ಸರ್ಕಾರವಲ್ಲ, ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ. ರಸ್ತೆ, ಚರಂಡಿ ನಿರ್ವಹಣೆ ಎಲ್ಲವೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ್ದು. ಹಾಗಾಗಿ ನಿಮಗೆ ಸಮಸ್ಯೆಗಳು ಎದುರಾಗಬಹುದು. ರಂಜಿತ್ ಕುಮಾರ್ ಪತ್ನಿಗೆ ಮತ ಹಾಕದೇ ಇದ್ರೆ ಸಮಾಜವಾದಿ ಪಕ್ಷದಿಂದ್ಲೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಹಿಂದೆಂದೂ ಕಂಡರಿಯದ ಕಷ್ಟಗಳು ಎದುರಾಗಬಹುದು ಅಂತಾ ಎಚ್ಚರಿಕೆ ನೀಡಿದ್ದಾರೆ.

ಹಾಗಾಗಿ ಮುಸ್ಲಿಂ ಮತದಾರರೆಲ್ಲ ನನ್ನ ಪತ್ನಿಗೆ ಮತ ಹಾಕಿ, ನಾನು ನಿಮ್ಮಲ್ಲಿ ಮತಭಿಕ್ಷೆ ಬೇಡುತ್ತಿಲ್ಲ. ಮತ ಹಾಕಿದ್ರೆ ನೀವು ಶಾಂತವಾಗಿ ಬದುಕಬಹುದು. ಇಲ್ಲದೇ ಹೋದ್ರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅಂತಾ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...