alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ರಕ್ಷಣೆಗೆ ಅಪರೇಷನ್ ‘ಸಂಕಟ ಮೋಚನ’

Operation-Sankat-Mochan-C-17-evacuates-156-Indians-from-South-Sudan-indialivetoday

ನವದೆಹಲಿ: ಆಫ್ರಿಕಾದ ಗಲಭೆ ಪೀಡಿತ ಪ್ರದೇಶ ದಕ್ಷಿಣ ಸೂಡಾನ್ ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ‘ಸಂಕಟ ಮೋಚನ’ ಕಾರ್ಯಾಚರಣೆ ಆರಂಭಿಸಿದೆ.

ಸಂಕಟ ಮೋಚನ, ಸೂಡಾನ್ ನಲ್ಲಿ ಸಿಕ್ಕಿರುವ 600 ಭಾರತೀಯರನ್ನು ಮರಳಿ ದೇಶಕ್ಕೆ ತರುವ ಯೋಜನೆಯಾಗಿದ್ದು ಗುರುವಾರದಂದು ಇದಕ್ಕೆ ಚಾಲನೆ ದೊರೆತಿದೆ. ಈ ಕಾರ್ಯಾಚರಣೆಯ ಮುಂದಾಳತ್ವವನ್ನು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ವಹಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಗೆ ಸಂಬಂಧಪಟ್ಟ 2 ವಿಶೇಷ ವಿಮಾನಗಳು ಈಗಾಗಲೇ ಆಫ್ರಿಕಾ ತಲುಪಿವೆ. ಮೊದಲ ಹಂತದಲ್ಲಿ ಮಹಿಳೆಯರು, ಮಕ್ಕಳನ್ನೊಳಗೊಂಡ 143 ಭಾರತೀಯರು ದೇಶಕ್ಕೆ ಮರಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...