alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಪ್ರಯಾಣಿಸಲು ಒಂದು ಚಾನ್ಸ್….

vistara_650ಒಮ್ಮೆಯಾದ್ರೂ ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದ್ರೆ ವಿಮಾನ ಪ್ರಯಾಣ ದರ ಕೇಳಿದ್ರೆ ಬಡ ಮತ್ತು ಮಧ್ಯಮ ವರ್ಗದವರ ಕನಸು ನುಚ್ಚುನೂರಾಗುತ್ತದೆ.

ಅದೇ ಕಾರಣಕ್ಕೆ ಸ್ಥಳೀಯ ವಿಮಾನಯಾನ ಸಂಸ್ಥೆ ವಿಸ್ತಾರಾ, ಭರ್ಜರಿ ಕೊಡುಗೆಗಳನ್ನು ನೀಡಿದೆ. ಕೇವಲ 949 ರೂಪಾಯಿಗೆ ವಿಮಾನದಲ್ಲಿ ಹಾರಾಡಲು ಅವಕಾಶ ಕಲ್ಪಿಸಿದೆ. ಸೆಪ್ಟೆಂಬರ್ 10ರಿಂದ ಈ ಕೊಡುಗೆ ಆರಂಭವಾಗಲಿದ್ದು, ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 30 ರೊಳಗೆ ನೀವು ವಿಮಾನ ಪ್ರಯಾಣ ಮಾಡಬಹುದು.

949 ರೂಪಾಯಿ ಟಿಕೆಟ್ ಖರೀದಿಸಿದ್ರೆ ನೀವು ಜಮ್ಮುವಿನಿಂದ ಶ್ರೀನಗರಕ್ಕೆ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಬಹುದು. ಗೋವಾ-ಮುಂಬೈಗೆ 1099 ರೂ., ದೆಹಲಿ-ಲಖ್ನೋಗೆ 1399 ರೂ., ಗುವಾಹಟಿ-ಬಗ್ದೋಗ್ರಾ ನಡುವಣ ರೂಟ್ ಗೆ 1699 ರೂ., ದೆಹಲಿ-ಚಂಡೀಗಢ ಮಾರ್ಗಕ್ಕೆ 1799 ರೂ.,ದೆಹಲಿ-ವಾರಣಾಸಿ ಮಾರ್ಗಕ್ಕೆ 1899 ರೂ. ನಿಗದಿಪಡಿಸಲಾಗಿದೆ.

ಆದ್ರೆ ಈ ಆಫರ್ ಅಡಿಯಲ್ಲಿ ಎಷ್ಟು ಸೀಟ್ ಗಳು ಲಭ್ಯವಿವೆ ಅನ್ನೋದನ್ನು ಬಹಿರಂಗಪಡಿಸಿಲ್ಲ. ಮತ್ತೊಂದ್ಕಡೆ ಏರ್ ಏಷ್ಯಾ ಕೂಡ ಪ್ರಯಾಣಿಕರಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ. ಏರ್ ಏಷ್ಯಾ ವಿಮಾನ ಪ್ರಯಾಣ ದರ ಕೇವಲ 599 ರೂಪಾಯಿಯಿಂದ ಆರಂಭವಾಗ್ತಿದೆ. ಸೆಪ್ಟೆಂಬರ್ 11 ರಿಂದ ನೀವು ಬುಕ್ಕಿಂಗ್ ಶುರು ಮಾಡಬಹುದು. ಈ ಕೊಡುಗೆ 2017 ರ ಫೆಬ್ರವರಿ 6 ರಿಂದ ಅಕ್ಟೋಬರ್ 28ರವರೆಗೆ ಪ್ರಯಾಣಿಸಲು ಅನ್ವಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...