alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟಿಗಾಗಿ ಕ್ಯೂ ನಿಲ್ಲುವವರಿಗೆಲ್ಲ ಸೆಹ್ವಾಗ್ ಕಿವಿಮಾತು

virender-sehwag-of-gemini-arabians

ಕಳೆದೊಂದು ವಾರದಿಂದ ಜನರಿಗೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲೋದೇ ಕಾಯಕವಾಗ್ಬಿಟ್ಟಿದೆ. ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿರೋದ್ರಿಂದ ಸಾರ್ವಜನಿಕರು ಹಳೆ ನೋಟು ಬದಲಾಯಿಸಿಕೊಳ್ಳಲು ಸರತಿ ಸಾಲಲ್ಲಿ ನಿಲ್ಲಲೇಬೇಕಾಗಿದೆ.

ಕೆಲವರಿಗೆ ಗಂಟೆಗಟ್ಟಲೆ ನಿಂತ್ರೂ ಹೊಸ ನೋಟು ಮಾತ್ರ ಸಿಗುತ್ತಿಲ್ಲ. ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿದ್ರೂ ಅದೆಷ್ಟೋ ಜನ ಬ್ಯಾಂಕ್ ಮುಂದೆ ಕಾದು ಕಾದು ಸುಸ್ತಾಗಿದ್ದಾರೆ. ಅಂಥವರಿಗೆಲ್ಲ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಿವಿಮಾತು ಹೇಳಿದ್ದಾರೆ. ಕರ್ನಾಟಕದ ಹುತಾತ್ಮ ಯೋಧ ಹನುಮಂತಪ್ಪ ಅವರ ತಾಳ್ಮೆಯನ್ನು ನೆನಪಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ ವೀರ ಯೋಧ ಹನುಮಂತಪ್ಪ ಹಿಮಾಲಯದ ಮೈನಸ್ 45 ಡಿಗ್ರಿ ಕೊರೆಯುವ ಚಳಿಯಲ್ಲಿ, 35 ಅಡಿ ಆಳದಲ್ಲಿ ತಮ್ಮನ್ನು ಯಾರಾದರೂ ರಕ್ಷಿಸಬಹುದೆಂಬ ಆಶಾವಾದದಲ್ಲಿ ಕುಟುಕು ಜೀವ ಕೈಯಲ್ಲಿ ಹಿಡಿದು ಬದುಕಿದ್ರು. 6 ದಿನ ಹೋರಾಟ ನಡೆಸಿದ್ರು. ಅಂಥದ್ರಲ್ಲಿ ನೋಟು ಬದಲಿಸಲು ಬ್ಯಾಂಕ್ ಮುಂದೆ ಕೆಲವೇ ಗಂಟೆಗಳು ಕಳೆಯಲು ಕಷ್ಟವೇ? ಅಂತಾ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಕ್ಯೂ ನಿಲ್ಲಲು ಸಿಟ್ಟಾಗಬೇಡಿ, ವೀರ ಯೋಧ ಹನುಮಂತಪ್ಪ ಅವರಂತೆ ತಾಳ್ಮೆ ಬೆಳೆಸಿಕೊಳ್ಳಿ ಅಂತಾ ಸಲಹೆ ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...