alex Certify
ಕನ್ನಡ ದುನಿಯಾ       Mobile App
       

Kannada Duniya

ಬದುಕಿ ಬರಲಿಲ್ಲ ಬೆಂಕಿ ಹಚ್ಚಿಕೊಂಡಿದ್ದ ಕೊಹ್ಲಿ ಅಭಿಮಾನಿ

ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಮಾಡಿದ್ದರಿಂದ ನೊಂದು ಅಭಿಮಾನಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿವೃತ್ತ ರೈಲ್ವೆ ಉದ್ಯೋಗಿ ಬಾಬುಲಾಲ್ ಬೈರ್ವಾ ಎಂಬಾತ ಕಳೆದ ಶುಕ್ರವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಇಂದು ಮೃತಪಟ್ಟಿದ್ದಾನೆ. ಬಾಬುಲಾಲ್, ಮಧ್ಯಪ್ರದೇಶದ ರಟ್ಲಮ್ ಜಿಲ್ಲೆಯವನು. ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಕೇವಲ 5 ರನ್ ಗೆ ಔಟಾಗುತ್ತಿದ್ದಂತೆ ಬೆಂಕಿ ಹಚ್ಚಿಕೊಂಡಿದ್ದಾನೆ. ಬಾಬುಲಾಲ್ ನ ತಲೆ, ಕೈಗಳು ಮತ್ತು ಮುಖದ ಬಾಗ ಬೆಂಕಿಯಲ್ಲಿ ಬೆಂದು ಹೋಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಇಂದು ಕೊನೆಯುಸಿರೆಳೆದಿದ್ದಾನೆ. ಕೋಣೆಯಲ್ಲಿ ಒಬ್ಬನೇ ಕುಳಿತು ಬಾಬುಲಾಲ್ ಮ್ಯಾಚ್ ನೋಡುತ್ತಿದ್ದ. ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಬೇಸರದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ನೋವು ತಡೆಯಲಾರದೆ ಆತ ಕಿರುಚಿಕೊಳ್ತಿರೋದನ್ನೆಲ್ಲ ನೋಡಿ ಮನೆಯ ಉಳಿದ ಸದಸ್ಯರು ಮತ್ತು ಅಕ್ಕಪಕ್ಕದವರೆಲ್ಲ ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದರು.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...