alex Certify
ಕನ್ನಡ ದುನಿಯಾ       Mobile App
       

Kannada Duniya

ಗೋರಖ್ಪುರದ ಮತದಾರರ ಪಟ್ಟಿಯಲ್ಲಿ ಕೊಹ್ಲಿ ಹೆಸರು…!

ಗೋರಖ್ಪುರ ಉಪಚುನಾವಣೆ ಮತದಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಸೇರ್ಪಡೆಯಾಗಿರೋದು ಚುನಾವಣಾ ಆಯೋಗಕ್ಕೆ ಮುಜುಗರ ತಂದಿದೆ. ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯ ಚುನಾವಣಾಧಿಕಾರಿ ರಾಜೀವ್ ರುಟೇಲಾ ಆದೇಶಿಸಿದ್ದಾರೆ.

ಇದೊಂದು ಗಂಭೀರ ಪ್ರಕರಣ ಎಂದಿರುವ ಚುನಾವಣಾಧಿಕಾರಿ ಪ್ರಭುನಾಥ್, 2 ದಿನಗಳಲ್ಲಿ ಈ ಬಗ್ಗೆ ವರದಿ ನೀಡುವಂತೆ ಎಸ್ ಡಿ ಎಂ ಸಜನ್ವಾಗೆ ಸೂಚಿಸಿರೋದಾಗಿ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಬೂತ್ ಮಟ್ಟದ ಅಧಿಕಾರಿ ಸುನೀತಾ ಚೌಧರಿ ಅವರಿಗೆ, ಮತದಾರರಿಗೆ ವಿತರಿಸಲು ವೋಟರ್ ಸ್ಲಿಪ್ ಗಳ ಬಂಡಲ್ ನೀಡಲಾಗಿತ್ತು. ವಿರಾಟ್ ಕೊಹ್ಲಿಯ ಹೆಸರು ಮತ್ತು ಫೋಟೋ ಇದ್ದ ವೋಟರ್ ಸ್ಲಿಪ್ ನೋಡಿ ಅವರು ಶಾಕ್ ಆಗಿದ್ದಾರೆ. ನಂತರ ಈ ವಿಚಾರವನ್ನು ಸ್ಥಳೀಯ ಕಾರ್ಪೊರೇಟರ್ ಗೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಯ ಹೆಸರು ಮತ್ತು ಫೋಟೋ ಇರುವ ವೋಟರ್ ಸ್ಲಿಪ್ ನಂಬರ್ 822. ಎಲೆಕ್ಟೋರಲ್ ಲಿಸ್ಟ್ ನಲ್ಲಿ ಅವರ ಐಡಿ RSV 2231801 ಅಂತಿದೆ. ಕೊಹ್ಲಿಯ ಮತದಾನ ಕೇಂದ್ರ ಲುಚುಯ್ ನ ಪ್ರಾಥಮಿಕ ಶಾಲೆ ಅಂತಾ ಮುದ್ರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...