alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾನ ಪ್ರಾಪ್ತಿಗಾಗಿ ಬಾಬಾ ಬಳಿ ಬಂದವಳ ಕಥೆ ಹೀಗಾಯ್ತು?

ಸಂತಾನ ಪ್ರಾಪ್ತಿಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಬದಲು ಮಹಿಳೆಯೊಬ್ಬಳು ಬಾಬಾ ಬಳಿ ಹೋಗಿದ್ದಾಳೆ. ಸಂತಾನ ಪ್ರಾಪ್ತಿಗೆ ಮದ್ದು ನೀಡುವುದಾಗಿ ನಂಬಿಸಿದ ಬಾಬಾ 37 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಮುಂಬೈನಲ್ಲಿ ನಡೆದಿದೆ.

ಬಂಗಾಳಿ ಬಾಬಾ ಬಳಿ ಬಂದ ಮಹಿಳೆಯನ್ನು ಬಾಬಾ ಮೊದಲು ಪ್ರಜ್ಞೆ ತಪ್ಪಿಸಿದ್ದಾನಂತೆ. ನಂತ್ರ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಮಹಿಳೆ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಆರೋಪಿ ಹೆಸರು ಅಜಯ್ ಹರಿಪಾದ್ ಚೌಧರಿ. ಕಳೆದ 10 ವರ್ಷಗಳಿಂದ ಬಾಬಾ ಇಲ್ಲಿಯೇ ನೆಲೆಸಿದ್ದ ಎನ್ನಲಾಗಿದೆ.

ಮಂಗಳವಾರ ಕಾಳಿ ಮಾತೆ ಪ್ರತ್ಯಕ್ಷಳಾಗ್ತಾಳೆಂದು ಜನರನ್ನು ನಂಬಿಸಿದ್ದ ಬಾಬಾ, ಅನೇಕರಿಗೆ ಉಪಚಾರ ನೀಡುವುದಾಗಿ ಮೋಸ ಮಾಡಿದ್ದ. 37 ವರ್ಷದ ಮಹಿಳೆ ಕೂಡ ಸಂತಾನ ಪ್ರಾಪ್ತಿಗಾಗಿ ಬಾಬಾ ಬಳಿ ಹೋಗಿದ್ದಳು. ಕಾಳಿ ಮಾತೆ ನಿನ್ನ ಮೇಲೆ ಕೋಪಗೊಂಡಿದ್ದಾಳೆ. ಆಕೆಯನ್ನು ಶಾಂತಗೊಳಿಸಬೇಕು ಎಂದಿದ್ದ ಬಾಬಾ ಮೇ. 2017 ರಿಂದ ಅಕ್ಟೋಬರ್ 2018 ರವರೆಗೆ ಅನೇಕ ಬಾರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...