alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸ್ಟಾರ್ ಗಳನ್ನು ನಾಚಿಸುವಂತಿದೆ ಈ ಅಂಕಲ್ ಡಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವ್ಯಕ್ತಿಗಳು ಕೆಲವೇ ಗಂಟೆಗಳಲ್ಲಿ ಹೆಸರು ಗಳಿಸ್ತಾರೆ. ಇದಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ಉತ್ತಮ ಉದಾಹರಣೆ. ಈಗ ಇನ್ನೊಬ್ಬ ವ್ಯಕ್ತಿ ಡಾನ್ಸ್ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಹಿರಿ ವಯಸ್ಸಿನಲ್ಲೂ ವ್ಯಕ್ತಿ ಮಾಡುವ ಡಾನ್ಸ್ ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಫಿದಾ ಆಗಿದ್ದಾರೆ.

ಈ ಹಿಂದೆ ಗೋವಿಂದಾ ಹಾಡಿಗೆ ಡಾನ್ಸ್ ಮಾಡಿದ್ದ ಸಂಜೀವ್ ಶ್ರೀವಾತ್ಸವ್ ಈಗ ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಂಜೀವ್ ವೃತ್ತಿಯಲ್ಲಿ ಪ್ರೊಫೇಸರ್. ಬೋಪಾಲ್ ನ ಬಾಬಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡ್ತಿದ್ದಾರೆ. ಸಂಜೀವ್ ಡಾನ್ಸ್ ವಿಡಿಯೋಕ್ಕೆ ಲಕ್ಷಾಂತರ ಲೈಕ್ಸ್ ಬಂದಿದೆ. ವಾಟ್ಸಾಪ್, ಫೇಸ್ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗ್ತಿದೆ.

ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಡಾನ್ಸ್ ಮಾಡ್ತಿದ್ದು ಅನೇಕರಿಗೆ ಸಂಜೀವ್ ಡಾನ್ಸ್ ಪ್ರೇರಣೆಯಾಗಿದೆ. ವಯಸ್ಸಾದ್ಮೇಲೆ ಎಂಜಾಯ್ ಮಾಡೋದು ಬಿಟ್ಟು ಮನೆಯಲ್ಲಿರಬೇಕು ಎನ್ನುವವರು ಈ ವಿಡಿಯೋ ನೋಡಬೇಕು. ಜೀವನವನ್ನು ಎಂಜಾಯ್ ಮಾಡಲು ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಂಜೀವ್ ಹಾಗೂ ಅವ್ರ ಪತ್ನಿ ತೋರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...