alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರ ಹಿಂಸೆ : ಬಾಲಕನ ಕೈಗೆ ಬಂತು ಕಲ್ಲು…!

ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ನಡೆದ ಗಲಾಟೆ ಖಂಡಿಸಿ ದಲಿತ ಸಂಘಟನೆ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿತ್ತು. ಬಂದ್ ವೇಳೆ ಮಹಾರಾಷ್ಟ್ರದ ಕೆಲ ಜಿಲ್ಲೆ ಹಾಗೂ ಮುಂಬೈನಲ್ಲಿ ಗಲಾಟೆ, ಹಿಂಸೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಗಲಾಟೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಬಾಲಕನೊಬ್ಬ ಕೈನಲ್ಲಿ ಕಲ್ಲು ಹಿಡಿದು ಹೊರಟಿರುವ ದೃಶ್ಯವಿದೆ. ಎಲ್ಲಿಗೆ ಹೊರಟಿದ್ದೀಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹುಡುಗ ಮರಾಠರನ್ನು ಹೊಡೆಯಲು ಹೊರಟಿದ್ದೇನೆ ಎನ್ನುತ್ತಾನೆ. ಈ ವಿಡಿಯೋ ವೀಕ್ಷಣೆ ಮಾಡಿದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಮುಂದಿನ ಪ್ರಜೆಗಳು. ದೇಶವನ್ನು ಶಾಂತಿಯುತವಾಗಿ ಮುನ್ನೆಡೆಸಬೇಕಾದ ಜವಾಬ್ದಾರಿ ಅವರ ಮೇಲಿದೆ. ಆದ್ರೆ ಸಣ್ಣವರಿರುವಾಗಲೇ ಅವರ ತಲೆಗೆ ದ್ವೇಷ, ಅಸೂಯ ತುಂಬಿದ್ರೆ ಮುಂದಿನ ಪರಿಸ್ಥಿತಿ ಹೇಗಾಗಬಹುದೆಂಬ ಆತಂಕ ಶಾಂತಿಪ್ರಿಯರನ್ನು ಕಾಡಲು ಶುರುವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...