alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಮೇಲೆ ಹಲ್ಲೆ

ಉತ್ತರ ಪ್ರದೇಶದ ಅಜಮ್ಗಡದ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಶಾಲಾ ಪ್ರಿನ್ಸಿಪಾಲ್ ಒಬ್ಬ ಶಿಕ್ಷಕಿಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ಘಟನೆ ನರ್ವೆ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶನಿವಾರ ಪ್ರಿನ್ಸಿಪಾಲ್ ಶಿಕ್ಷಕಿ ಸುಧಾಗೆ ಭಾನುವಾರ ಬೆಳಿಗ್ಗೆ 8.30ಕ್ಕೆ ಶಾಲೆಗೆ ಬರುವಂತೆ ಹೇಳಿದ್ದಾನೆ. ಮಕ್ಕಳಿಗೆ ಪಲ್ಸ್ ಪೋಲಿಯೋ ಇರುವ ಕಾರಣ ಬೆಳಿಗ್ಗೆ ಸ್ಕೂಲಿಗೆ ಬರುವಂತೆ ಸೂಚನೆ ನೀಡಿದ್ದಾನೆ.

ಪಲ್ಸ್ ಪೊಲೀಯೋ ಹಿನ್ನೆಲೆಯಲ್ಲಿ ಗ್ರಾಮದ ಅನೇಕ ಜನರು ಬೆಳಿಗ್ಗೆ 8.30 ರಿಂದ ಶಾಲೆಗೆ ಬರಲು ಶುರುಮಾಡಿದ್ದಾರೆ. ಮಹಿಳಾ ಶಿಕ್ಷಕಿ ಕೂಡ ತನ್ನ ಮಗುವಿನೊಂದಿಗೆ ಶಾಲೆಗೆ ಬಂದಿದ್ದಾರೆ. ಬೆಳಿಗ್ಗೆ 11.30 ಆದ್ರೂ ಸಹ ಶಿಕ್ಷಕರಾಗ್ಲಿ, ಪ್ರಿನ್ಸಿಪಾಲ್ ಆಗ್ಲಿ ಶಾಲೆಗೆ ಬರಲಿಲ್ಲ. ಸುಧಾ ಪ್ರಿನ್ಸಿಪಾಲ್ ಗೆ ಕರೆ ಮಾಡಿ ಕೇಳಿದ್ದಾಳೆ. ನೀನೂ ಮನೆಗೆ ವಾಪಸ್ ಹೋಗು ಎಂದು ಪ್ರಿನ್ಸಿಪಾಲ್ ಹೇಳಿದ್ದಾನೆ ಎನ್ನಲಾಗಿದೆ.

ಶಾಲೆಗೆ ಬಂದು ರಿಜಿಸ್ಟರ್ ಬುಕ್ ನೀಡಿದಲ್ಲಿ ಸಹಿ ಹಾಕಿ ಹೋಗುತ್ತೇನೆಂದು ಶಿಕ್ಷಕಿ ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ಪ್ರಿನ್ಸಿಪಾಲ್ ಮಗನ ಜೊತೆ ಶಾಲೆಗೆ ಬಂದಿದ್ದಾನೆ. ಮಹಿಳಾ ಶಿಕ್ಷಕಿ ಮಗುವನ್ನು ಕೆಳಗೆ ಎಸೆದು, ಶಿಕ್ಷಕಿ ಜುಟ್ಟು ಹಿಡಿದು ಹೊಡೆದಿದ್ದಾನೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿನ್ಸಿಪಾಲ್ ಅನೇಕ ದಿನಗಳಿಂದ ಶಿಕ್ಷಕರಿಗೆ ವೇತನ ನೀಡಿಲ್ಲ ಎಂಬ ಆರೋಪವೂ ಇದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...