alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ನೀವು ಶೇರ್ ಮಾಡದೆ ಇರಲಾರಿರಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಸೆಲೆಬ್ರಿಟಿಗಳಿಂದ ಹಿಡಿದು ಶ್ರೀ ಸಾಮಾನ್ಯರವರೆಗೆ ಎಲ್ಲರ ಗಮನ ಸೆಳೆದಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ಪ್ರತಿಭೆ ಕಂಡು ಎಲ್ಲರೂ ತಲೆದೂಗುತ್ತಿದ್ದಾರೆ.

ಹೌದು….! ವಿಡಿಯೋದಲ್ಲಿರುವ ವ್ಯಕ್ತಿ ಅಂತಹ ದೈತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಸಾಮಾನ್ಯವಾಗಿ ಆರ್ಕೆಸ್ಟ್ರಾವೆಂದರೆ ಅಲ್ಲಿ ವಿವಿಧ ವಾದ್ಯಗಾರರಿರುತ್ತಾರೆ. ಆದರೆ ಈ ವಿಡಿಯೋದಲ್ಲಿ ಒಬ್ಬನೇ ವ್ಯಕ್ತಿ ಏಕಕಾಲದಲ್ಲಿ ಹಲವು ವಾದ್ಯಗಳನ್ನು ನುಡಿಸಿದ್ದಾನೆ. ಅಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ ಹಾಡನ್ನೂ ಹಾಡಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ವಿಡಿಯೋವನ್ನು ಶೇರ್ ಮಾಡಿದ್ದ ನಟ ಫರಾನ್ ಅಖ್ತರ್, ಈತನ ಪ್ರತಿಭೆಗೆ ಶಹಬ್ಬಾಶ್ ಹೇಳಿದ್ದರಲ್ಲದೆ ಎಲ್ಲರೂ ಶೇರ್ ಮಾಡುವ ಮೂಲಕ ಆತನನ್ನು ಪ್ರೋತ್ಸಾಹಿಸಿ ಎಂದು ಹೇಳಿದ್ದರು. ಆ ಬಳಿಕ ಮಹೀಂದ್ರಾ ಗ್ರೂಪ್ ನ ಮುಖ್ಯಸ್ಥ ಆನಂದ್ ಮಹೀಂದ್ರಾ, ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ಈತನ ಕುರಿತು ಮಾಹಿತಿ ನೀಡಿದರೆ ತಾವು ನೆರವಾಗುವುದಾಗಿ ತಿಳಿಸಿದ್ದಾರೆ.

ಬಹುಮುಖ ಪ್ರತಿಭೆಯ ಈ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅಲ್ಲದೆ ಯಾರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾರೆಂಬುದೂ ಬಹಿರಂಗವಾಗಿಲ್ಲ. ಕೆಲವರು ಈತ ಈಶಾನ್ಯ ಭಾರತದವನಾಗಿರಬಹುದೆಂದು ಹೇಳಿದರೆ ಮತ್ತೆ ಹಲವರು ಬೇರೆ ದೇಶದ ವ್ಯಕ್ತಿ ಇರಬಹುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...