alex Certify
ಕನ್ನಡ ದುನಿಯಾ       Mobile App
       

Kannada Duniya

`ಭೂತ ಜೋಕಾಲಿ ತೂಗುತ್ತಿತ್ತು, ಮಕ್ಕಳು ವಿಡಿಯೋ ಮಾಡಿದರು’…!

ಸಾಮಾಜಿಕ ಜಾಲತಾಣದಲ್ಲಿ ಭೂತವೊಂದು ಜೋಕಾಲಿ ತೂಗುತ್ತಿರುವ ವಿಡಿಯೋ ವೈರಲ್ ಆಗಿದೆ. ಅದೊಂದು ಪಾರ್ಕ್. ಪಾರ್ಕ್ ನಲ್ಲಿ ಎರಡು ಜೋಕಾಲಿಯಿದೆ. ಚಂಡಮಾರುತವಾಗ್ಲಿ, ಗಾಳಿಯಾಗ್ಲಿ ಅಲ್ಲಿಲ್ಲ. ಒಂದು ಜೋಕಾಲಿ ಸ್ಥಿರವಾಗಿದೆ. ಇನ್ನೊಂದು ಜೋಕಾಲಿ ಮಾತ್ರ ಜೋರಾಗಿ ತೂಗುತ್ತಿದೆ. ಜೋಕಾಲಿ ಮೇಲೆ ಯಾರೂ ಕುಳಿತಿಲ್ಲ. ಅಂದ್ರೆ ಇದ್ರ ಮೇಲೆ ಭೂತವಿದ್ಯಾ ಎಂಬ ಅನುಮಾನ ಕಾಡ್ತಿದೆ.

ವಿಡಿಯೋ ವೈರಲ್ ಆಗ್ತಿದ್ದಂತೆ ಇದು ಮುಂಬೈ ಪಾರ್ಕಿನದ್ದು ಎನ್ನಲಾಗ್ತಾಯಿತ್ತು. ವಿಡಿಯೋದಲ್ಲಿ ಕೆಲ ಮಕ್ಕಳ ಧ್ವನಿ ಕೂಡ ಕೇಳಿಸುತ್ತದೆ. ವಿಡಿಯೋದಲ್ಲಿ ಜೋಕಾಲಿ ಜೋರಾಗಿ ತೂಗುತ್ತಿದೆ. ಕೆಲ ಸಮಯದ ನಂತ್ರ ಜೋಕಾಲಿ ನಿಲ್ಲುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಮಾಧ್ಯಮಗಳು ಈ ಸ್ಥಳ ಪತ್ತೆಗೆ ಮುಂದಾಗಿದ್ದವು.

ಈಗ ಈ ವಿಡಿಯೋದಲ್ಲಿರುವ ಪಾರ್ಕ್ ಮುಂಬೈನದ್ದಲ್ಲ, ಬದಲಾಗಿ ದೆಹಲಿಯದು ಎಂಬುದು ಗೊತ್ತಾಗಿದೆ. ಜೂನ್ 5 ರಂದು ವಿಡಿಯೋ ಮಾಡಿದ ಅಮನ್ ಹೆಸರಿನ ಹುಡುಗ ಕೂಡ ಮಾಧ್ಯಮಗಳ ಕೈಗೆ ಸಿಕ್ಕಿದ್ದ. ದೂರದಿಂದ ಜೋಕಾಲಿ ತೂಗುತ್ತಿರುವುದನ್ನು ನೋಡಿದ್ದೆವು. ಹತ್ತಿರ ಹೋಗಿ ವಿಡಿಯೋ ಮಾಡಿದ್ವಿ. ನಂತ್ರ ಭಯವಾಯ್ತು. ಮನೆಗೆ ಓಡಿ ಹೋದ್ವಿ ಎಂದಿದ್ದಾನೆ ಬಾಲಕ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...