alex Certify
ಕನ್ನಡ ದುನಿಯಾ       Mobile App
       

Kannada Duniya

ಹದ್ದಿನ ಪಾದದ ಮೇಲೆ ನಿಂತು ಮಂಟಪಕ್ಕೆ ಬಂದ್ರು ವಧು-ವರ…!

ನಮ್ಮ ದೇಶದಲ್ಲಿ ಮದುವೆಯನ್ನು ಉತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ. ಅದ್ಧೂರಿ ಮದುವೆಗೆ ಜನರು ಹೊಳೆಯಂತೆ ಹಣ ಖರ್ಚು ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ವಧು-ವರರು ವಿಭಿನ್ನವಾಗಿ ಮಂಟಪಕ್ಕೆ ಬರ್ತಿದ್ದಾರೆ. ಕೆಲವರು ಎತ್ತಿನ ಗಾಡಿಯಲ್ಲಿ ಬಂದ್ರೆ ಮತ್ತೆ ಕೆಲವರು ಹೆಲಿಕ್ಯಾಪ್ಟರ್ ನಲ್ಲಿ ಮದುವೆ ಮನೆ ತಲುಪುತ್ತಿದ್ದಾರೆ. ಈ ಬಾರಿ ವರ-ವಧು ಬಂದ ರೀತಿ ಆಶ್ಚರ್ಯ ಹುಟ್ಟಿಸುವಂತಿದೆ.

ವರ-ವಧು ಹದ್ದಿನ ಪಾದದ ಮೇಲೆ ನಿಂತುಕೊಂಡು ಬಂದಿದ್ದಾರೆ. ಆಶ್ಚರ್ಯವಾದ್ರೂ ಇದು ಸತ್ಯ. ಹದ್ದಿನ ರೂಪದಲ್ಲಿದ್ದ ಕ್ರೇನ್ ಬಳಸಿದ್ದರು. ಈ ಕ್ರೇನ್ ಗೆ ಅಲಂಕಾರ ಮಾಡಲಾಗಿತ್ತು. ಇದ್ರ ಮೇಲೆ ನಿಂತಿದ್ದ ವಧು-ವರರು ಎಲ್ಲರ ಗಮನ ಸೆಳೆದ್ರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ ವಧು-ವರರು ಮದುವೆ ಮನೆ ತಲುಪಲು ತುಂಬಾ ಸಮಯ ತೆಗೆದುಕೊಂಡಿದ್ದರಂತೆ. ಸಂಬಂಧಿಕರು ವರ-ವಧುವಿಗಾಗಿ ಕಾಯುತ್ತಿದ್ದರಂತೆ. ಈ ವೇಳೆ ಆಕಾಶದ ಮೇಲೆ ವಧು-ವರರು ಕಾಣಿಸಿದ್ದಾರೆ. ಹದ್ದಿನ ಪಾದದ ಮೇಲೆ ವಧು-ವರ ನಿಂತಿರುವಂತೆ ಕೆಳಗಿದ್ದವರಿಗೆ ಕಂಡಿದೆ. ವರ-ವಧು ಮದುವೆಗೆ ಹೀಗೂ ಬರಬಹುದು ಎಂದು ಊಹಿಸಿರದ ಸಂಬಂಧಿಕರು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...