alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಸರ್ಕಾರ ನೀಡ್ತಿದೆಯಾ 10 ಸಾವಿರ ರೂ. ಚೆಕ್…?

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಆಗಸ್ಟ್ 15ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ಬಾಲಕಿಯರಿಗೆ ಉಚಿತವಾಗಿ ಸೈಕಲ್ ನೀಡ್ತಾರೆಂಬ ಸುದ್ದಿ ಹರಡಿತ್ತು. ಈಗ ಇನ್ನೊಂದು ಸುದ್ದಿ ಹರಿದಾಡ್ತಿದೆ. ಪ್ರಧಾನ ಮಂತ್ರಿ ಮೋದಿ ಫೋಟೋ ಹಾಕಿ, ಮೋದಿ ಒಂದು ವರ್ಷದಿಂದ 18 ವರ್ಷದ ದೇಶದ ಎಲ್ಲ ಹುಡುಗಿಯರಿಗೆ 10 ಸಾವಿರ ರೂಪಾಯಿ ಚೆಕ್ ನೀಡುತ್ತಾರೆಂಬ ಸಂದೇಶ ನೀಡಲಾಗಿದೆ. ಹೆಸರು ನೋಂದಣಿಗೆ ಆಗಸ್ಟ್ 15 ಕೊನೆ ದಿನವೆಂದು ನಮೂದಿಸಲಾಗಿದ್ದು, ನೋಂದಣಿಗೆ ಲಿಂಕ್ ನೀಡಲಾಗಿದೆ.

ಲಿಂಕ್ ಪರಿಶೀಲನೆ ನಡೆಸಿದಾಗ ಇದೊಂದು ನಕಲಿ ವೆಬ್ಸೈಟ್ ಎಂಬುದು ಗೊತ್ತಾಗಿದೆ. ಸರ್ಕಾರದ ಯಾವುದೇ ಯೋಜನೆ ಜೊತೆ ಇದು ಸಂಬಂಧ ಹೊಂದಿಲ್ಲ. ಕೇಂದ್ರ ಸರ್ಕಾರ ಕೂಡ 10 ಸಾವಿರ ರೂಪಾಯಿ ಚೆಕ್ ನೀಡುವ ಯಾವುದೇ ಯೋಜನೆಯ ಘೋಷಣೆ ಮಾಡಿಲ್ಲ.

ವೆಬ್ಸೈಟ್ ಓಪನ್ ಮಾಡ್ತಿದ್ದಂತೆ ಹೆಸರು ಹಾಗೂ ವಯಸ್ಸನ್ನು ನಮೂದಿಸಬೇಕಾಗುತ್ತದೆ. ಇದನ್ನು ಬಿಟ್ರೆ ವಿಳಾಸವಾಗ್ಲಿ, ಫೋನ್ ನಂಬರ್ ಅಥವಾ ಇ-ಮೇಲ್ ಐಡಿಯನ್ನಾಗ್ಲಿ ವೆಬ್ಸೈಟ್ ಕೇಳಿಲ್ಲ. ಹಾಗಾದ್ರೆ ಹಣ ಜನರನ್ನು ತಲುಪುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಜೊತೆಗೆ ಇದು ಸರ್ಕಾರಿ ವೆಬ್ಸೈಟ್ ಅಲ್ಲ. ಜನರಿಗೆ ಜಾಗೃತಿ ಮೂಡಿಸುವುದು ಮಾತ್ರ ನಮ್ಮ ಕೆಲಸ. ಇಲ್ಲಿ ಹಣ ನೀಡಲಾಗುವುದಿಲ್ಲವೆಂದು ಬರೆಯಲಾಗಿದೆ. ವೆಬ್ಸೈಟ್ ಟ್ರಾಫಿಕ್ ಹೆಚ್ಚಿಸಿಕೊಂಡು ಜಾಹೀರಾತು ಪಡೆಯಲು ವೆಬ್ಸೈಟ್ ಈ ಮಾರ್ಗ ಹಿಡಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...