alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಲಕಿಯ ಕರುಣಾಜನಕ ವಿಡಿಯೋ

balaki-ap-a

ವಿಜಯವಾಡ: ನೋಡಿದವರ ಮನಕಲಕುವಂತಿದೆ ಈ ಬಾಲಕಿ ವಿಡಿಯೋ. ಆದರೆ, ಕಲ್ಲು ಹೃದಯದ ಅಪ್ಪ ಮಾತ್ರ ಕನಿಕರ ತೋರಲಿಲ್ಲ. ಪರಿಣಾಮ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಆಂಧ್ರಪ್ರದೇಶದ 10 ವರ್ಷದ ಬಾಲಕಿ ಸಾಯಿಶ್ರೀ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿ, ತನ್ನನ್ನು ಸಾವಿನ ದವಡೆಯಿಂದ ಪಾರು ಮಾಡುವಂತೆ ಅಪ್ಪನನ್ನು ಅಂಗಲಾಚಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡಿದವರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ಬಾಲಕಿಯ ತಂದೆ, ತಾಯಿ ಬೇರೆಯಾಗಿ ವಾಸಿಸುತ್ತಿದ್ದಾರೆ. ಕ್ಯಾನ್ಸರ್ ಪೀಡಿತಳಾಗಿರುವ ಬಾಲಕಿಗೆ ಚಿಕಿತ್ಸೆ ಕೊಡಿಸಲು ತಾಯಿಯ ಕೈಯಲ್ಲಿ ಸಾಧ್ಯವಾಗಿಲ್ಲ.

ತನ್ನ ಸಾವಿನ ಕೊನೆ ಕ್ಷಣದಲ್ಲಿದ್ದ ಬಾಲಕಿ 10 ದಿನಗಳ ಹಿಂದೆ ತಂದೆಯನ್ನುದ್ದೇಶಿಸಿ, ಚಿಕಿತ್ಸೆ ಕೊಡಿಸುವಂತೆ ಅಂಗಲಾಚಿ ಬೇಡಿಕೊಂಡಿದ್ದಾಳೆ. ಮನೆಯನ್ನು ಮಾರಿ ತನ್ನನ್ನು ಉಳಿಸಿಕೊಳ್ಳುವಂತೆ ಬಾಲಕಿ ಅಪ್ಪನಿಗೆ ಮನವಿ ಮಾಡಿದ್ದಾಳೆ.

ನಿನ್ನ ಬಳಿ ಹಣವಿಲ್ಲವೆಂದು ಹೇಳುತ್ತಿರುವೆ. ಆದರೆ, ಮನೆ ಇದೆಯಲ್ಲ. ಅದನ್ನು ಮಾರಿಯಾದರೂ ನನ್ನನ್ನು ಉಳಿಸಿ. ನಾನು ಆಟವಾಡಬೇಕು, ಶಾಲೆಗೆ ಹೋಗಬೇಕು ಎಂದೆಲ್ಲಾ ಮುಗ್ಧ ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ. ಇದನ್ನು ಆಕೆಯ ತಂದೆಗೆ ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ.

ಆದರೆ, ತಂದೆಯ ಮನಸು ಕರಗಿಲ್ಲ. ಬಾಲಕಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾಳೆ. ಆಕೆ ಅಪ್ಪನಿಗೆ ಕಳುಹಿಸಿದ್ದ ಕರುಣಾಜನಕ ವಿಡಿಯೋ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...