alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಜ್ಯದ ಸಿಎಂ ಕಾರ್ ಮೇಲೂ ಕಾಣಲ್ಲ ಕೆಂಪು ಲೈಟ್

lal-batti_1483515738

ಪಂಜಾಬ್ ಹೊಸ ಸರ್ಕಾರದ ಹೊಸ ನಿರ್ಧಾರ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್ ನಲ್ಲಿ ವಿಐಪಿ ಸಂಸ್ಕೃತಿ ತೆಗೆದು ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ಸಿಎಂ ಸೇರಿದಂತೆ ಯಾವುದೇ ವಿಐಪಿಗಳ ಕಾರಿನ ಮೇಲೆ ಕೆಂಪು ಲೈಟ್ ಇರೋದಿಲ್ಲ.

ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ನಂತ್ರ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಮಂತ್ರಿಗಳು ತಮ್ಮ ಕಾರ್ ಮೇಲಿದ್ದ ಕೆಂಪು ಲೈಟನ್ನು ತೆಗೆದು ಹಾಕಿದ್ದಾರೆ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ನೊಟೀಸ್ ಜಾರಿಯಾಗಿಲ್ಲ.

ಶನಿವಾರ ನಡೆದ ಕ್ಯಾಬಿನೆಟ್ ಸಭೆ ನಂತ್ರ ಮಂತ್ರಿಗಳು ಕಾರ್ ಮೇಲಿದ್ದ ಕೆಂಪು ದೀಪವನ್ನು ತೆಗೆದಿದ್ದಾರೆ. ವಿಐಪಿ ಸಂಸ್ಕೃತಿ ತೆಗೆದು ಹಾಕುವುದು ಕಾಂಗ್ರೆಸ್ ಪ್ರಣಾಳಿಕೆಯ ಒಂದು ಭಾಗವಾಗಿತ್ತು. ಅದ್ರಲ್ಲಿ ಸಿಎಂ ಹಾಗೂ ಮಂತ್ರಿಗಳ ಉಲ್ಲೇಖವಿರಲಿಲ್ಲ. ಆದ್ರೆ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ, ಮಂತ್ರಿಗಳ ಹೆಸರನ್ನೂ ಸೇರಿಸಲಾಗಿದೆ. ವಿಐಪಿಗಳ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರು ಹೊರತುಪಡಿಸಿ ಮತ್ಯಾರ ಕಾರ್ ನಲ್ಲಿಯೂ ಇನ್ಮುಂದೆ ಕೆಂಪು ಬೆಳಕು ಕಾಣುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...