alex Certify
ಕನ್ನಡ ದುನಿಯಾ       Mobile App
       

Kannada Duniya

ಇವರೆಲ್ಲ ನದಿಯಲ್ಲಿ ಹುಡುಕಿದ್ದೇನು ಗೊತ್ತಾ..?

coin-serch

ಭರತ್ ಪುರ: ನದಿಯಲ್ಲಿ ಬೆಳ್ಳಿ ನಾಣ್ಯ ಸಿಕ್ಕ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಸುತ್ತಲಿನ ಜನರೆಲ್ಲಾ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಾಜಸ್ತಾನ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿರುವ ಬಾಂಗಾಂಗ ನದಿಯಲ್ಲಿ ಜನರೆಲ್ಲಾ ಮೀನಿನ ಬದಲು ಚಿನ್ನದ ನಾಣ್ಯಕ್ಕಾಗಿ ಹುಡುಕಾಟ ನಡೆಸಿದ್ದಾರೆ.

1904 -1919 ರ ಅವಧಿಯಲ್ಲಿದ್ದ ಕಿಂಗ್ ಜಾರ್ಜ್ ಭಾವಚಿತ್ರ ಒಳಗೊಂಡ ಬೆಳ್ಳಿ ನಾಣ್ಯಗಳು ಈ ನದಿಯಲ್ಲಿ ಕೆಲವರಿಗೆ ಸಿಕ್ಕಿವೆ. ಇದು ಸುತ್ತಲಿನ ಮಲ್ಹೆಡಾ, ಹಿಂಗುಂಟಾ, ಖಾನ್ ಪುರ, ಬಚ್ರೇನ್ ಗ್ರಾಮಗಳ ಜನರ ಕಿವಿಗೆ ಬಿದ್ದಿದೆ.

ಗ್ರಾಮಸ್ಥರೆಲ್ಲಾ ಮಾಡುವ ಕೆಲಸ ಬಿಟ್ಟು ನದಿಯಲ್ಲಿ ಬೆಳ್ಳಿ ನಾಣ್ಯಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸುಮಾರು 50 ನಾಣ್ಯಗಳು ಗ್ರಾಮಸ್ಥರಿಗೆ ಸಿಕ್ಕಿವೆ.

ಇದು ಗಮನಕ್ಕೆ ಬರುತ್ತಿದ್ದಂತೆ ಭರತ್ ಪುರ ಜಿಲ್ಲಾ ಕಲೆಕ್ಟರ್ ನರೇಂದ್ರ ಕುಮಾರ್ ಗುಪ್ತ, ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...