alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪ್ರಿಯರಿಗೆ ಬಯಸದೇ ಬಂತು ಭಾಗ್ಯ..!

ಬಿಟ್ಟಿಯಾಗಿ ಸಿಕ್ರೆ ಜನ ಯಾವುದನ್ನ ಬಿಡ್ತಾರೆ ಹೇಳಿ? ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಂತೂ ಸಿಕ್ಕಿದ್ದೇ ಸೀರುಂಡೆ ಎಂಬಂತಾಗಿತ್ತು ಗುಂಡು ಪ್ರಿಯರ ಸ್ಥಿತಿ. ವೇಮುಲಪಲ್ಲಿ ಗ್ರಾಮದ ಬಳಿ ಬಿಯರ್ ಬಾಟಲಿ ತುಂಬಿಕೊಂಡು ಬರ್ತಿದ್ದ ವ್ಯಾನ್ ಒಂದು ಪಲ್ಟಿಯಾಗಿತ್ತು.

ವಾಹನದಲ್ಲಿ ಬಿಯರ್ ಇದೆ ಅನ್ನೋದು ಮೊದಲು ಜನರಿಗೆ ಗೊತ್ತಿರಲಿಲ್ಲ. ಚಾಲಕನಿಗೆ ಪೆಟ್ಟಾಗಿದ್ಯಾ ಅಂತಾ ನೋಡಲು ಜನರು ಸೇರಿದ್ರು. ಆದ್ರೆ ಅಲ್ಲಿ ರಸ್ತೆ ತುಂಬಾ ಬಿದ್ದಿರೋದು ಬಿಯರ್ ಬಾಟಲಿ ಅಂತಾ ಗೊತ್ತಾಗ್ತಿದ್ದಂತೆ ಸಿಕ್ಕಿದಷ್ಟು ಬಾಚಿಕೊಂಡು ಓಡಿ ಹೋಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅರ್ಧಕ್ಕರ್ಧ ಬಾಟಲಿಗಳು ಖಾಲಿಯಾಗಿದ್ವು. ಉಳಿದಿದ್ದನ್ನು ಜನರು ಹೊತ್ತೊಯ್ಯದಂತೆ ಪೊಲೀಸರು ಕಾದುಕೊಂಡ್ರು. ಕೊನೆಗೆ ಬಿಯರ್  ಬಾಟಲಿಗಳನ್ನು ಬೇರೆ ವಾಹನಕ್ಕೆ ತುಂಬಿ ಕಳಿಸಿಕೊಡಲಾಯ್ತು. ಸುಮಾರು 50,000 ಮೌಲ್ಯದ 350 ಬಾಕ್ಸ್ ಬಿಯರ್ ಕಳವಾಗಿದೆ ಅಂತಾ ಅಂದಾಜಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...