alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಮಾಡುವಾಗ ಸಿಕ್ಕಿಬಿದ್ದವರಿಗೆ ಮದುವೆ ಯೋಗ…!

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಸೆಕ್ಸ್ ಮಾಡುವ ವೇಳೆ ಗ್ರಾಮಸ್ಥರು ಕೈಗೆ ಸಿಕ್ಕಿಬಿದ್ದಿದ್ದು ಅವರುಗಳಿಗೆ ದೇವಾಲಯದಲ್ಲಿ ವಿವಾಹ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಜೌನಪುರ್ ಜಿಲ್ಲೆಯ ಕೇರಾಕತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜು ಎಂಬಾತ ಈ ಯುವತಿಯನ್ನು ಕೇವಲ ಐದು ದಿನಗಳ ಹಿಂದಷ್ಟೇ ಭೇಟಿಯಾಗಿದ್ದು, ಮೊದಲ ನೋಟದಲ್ಲೇ ಯುವತಿಯೊಂದಿಗೆ ಪ್ರೀತಿಗೆ ಬಿದ್ದಿದ್ದನೆನ್ನಲಾಗಿದೆ. ಬಳಿಕ ಆಕೆಯನ್ನು ಭೇಟಿಯಾಗಲು ಗ್ರಾಮಕ್ಕೆ ಬಂದಿದ್ದು, ಇಬ್ಬರೂ ಈ ವೇಳೆ ಸೆಕ್ಸ್ ನಲ್ಲಿ ತೊಡಗಿದ್ದಾರೆ.

ಈ ಜೋಡಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು, ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಯುವತಿ ಪೋಷಕರು ಮದುವೆಯ ಪ್ರಸ್ತಾಪವನ್ನಿಟ್ಟಿದ್ದಾರೆ.

ಯುವಕನ ಪೋಷಕರು ಮೊದಲಿಗೆ ಇದಕ್ಕೆ ಒಪ್ಪಿಕೊಳ್ಳಲಿಲ್ಲವಾದರೂ ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು, ಅವರುಗಳ ಮನವೊಲಿಸಿದ್ದು, ಬಳಿಕ ಸಮೀಪದಲ್ಲಿದ್ದ ದೇವಾಲಯದಲ್ಲಿ ಯುವ ಜೋಡಿಯ ವಿವಾಹ ನೆರವೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...