alex Certify
ಕನ್ನಡ ದುನಿಯಾ       Mobile App
       

Kannada Duniya

‘ಹಬ್ ಆಫ್ ಬ್ಯಾಚುಲರ್ಸ್’ ಆಗಿದೆ ಈ ಗ್ರಾಮ

mar 12 a

ಭೋಪಾಲ್: ವಯಸ್ಸಿಗೆ ಬಂದ ಮೇಲೆ ಗಂಡು, ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಸಾಮಾನ್ಯ. ಆದರೆ, ವಯಸ್ಸು ಮೀರುತ್ತಿದ್ದರೂ, ಈ ಗ್ರಾಮದ ಯುವಕರಿಗೆ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲ. ಇದರಿಂದಾಗಿ ಮದುವೆಯನ್ನೇ ಮುಂದೂಡಿದ್ದಾರೆ ಯುವಕರು.

ಮಧ್ಯಪ್ರದೇಶದ ಬುಂದೇಲ್ ಖಂಡ್ ಪ್ರಾಂತ್ಯದ ಬಾಕ್ಸ್ ವಾ ಗ್ರಾಮದಲ್ಲಿನ ಯುವಕರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಈ ಊರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಬರಗಾಲ. ಹೌದು ಬರಗಾಲದ ಕಾರಣಕ್ಕೆ, ಈ ಊರಿನಲ್ಲಿ ನೀರಿನ ಸಮಸ್ಯೆ ತೀವ್ರತರವಾಗಿದೆ. ಕುಡಿಯುವ ನೀರು ಸಿಗದೇ ಪರದಾಡುವಂತಹ ಪರಿಸ್ಥಿತಿ ಇದ್ದು, ನೀರು ತರಲು ದೂರದವರೆಗೂ ಹೋಗಬೇಕಿದೆ. ಅಲ್ಲದೇ, ಗ್ರಾಮದಲ್ಲಿ ನೀರು ತರುವುದೇ ದೊಡ್ಡ ಕೆಲಸವಾಗಿದೆ.

ಇದರಿಂದಾಗಿ ಗ್ರಾಮದಲ್ಲಿ 150 ಕ್ಕೂ ಹೆಚ್ಚಿನ ಯುವಕರು ಮದುವೆ ವಯಸ್ಸಿಗೆ ಬಂದಿದ್ದರೂ, ಮದುವೆಯಾಗಿಲ್ಲ. ನೀರಿಲ್ಲದ ಊರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಆ ನಂತರವಾದರೂ ತಮ್ಮ ಮಕ್ಕಳ ಮದುವೆ ಆಗಬಹುದು ಎನ್ನುತ್ತಾರೆ ಗ್ರಾಮದ ಹಿರಿಯರು. ಅಂದ ಹಾಗೆ ಈ ಗ್ರಾಮವನ್ನು ‘ಹಬ್ ಆಫ್ ಬ್ಯಾಚುಲರ್ಸ್’ ಎಂದೂ ಕರೆಯಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...