alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ನೀಡಿ ಸಾಮೂಹಿಕ ಅತ್ಯಾಚಾರ ಮುಚ್ಚಿ ಹಾಕುವ ಯತ್ನ ನಡೆಸಿದ್ರು ದೊಡ್ಡವರು

ಉತ್ತರ ಪ್ರದೇಶದ ಅಲೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗ್ರಾಮಸ್ಥರು ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಹಣದ ದಾರಿ ಹಿಡಿದಿದ್ದಾರೆ. ಪಂಚಾಯತಿ ಮುಖ್ಯಸ್ಥರು ಪೀಡಿತೆಗೆ 80,000 ರೂಪಾಯಿ ನೀಡಿ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ.

ಪೀಡಿತೆ ಸಹೋದರನಿಗೆ ಪಂಚಾಯತಿಯ ತೀರ್ಪು ಸರಿಬರಲಿಲ್ಲ. ಆತ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ. ನಾಲ್ವರ ವಿರುದ್ಧ ದೂರು ದಾಖಲಾಗಿದೆ. 14 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದರಂತೆ.

ಈ ವಿಷ್ಯವನ್ನು ತಂದೆ, ತಾಯಿಯಿಲ್ಲದ ಪೀಡಿತೆ ಚಿಕ್ಕಮ್ಮನಿಗೆ ಹೇಳಿದ್ದಾಳೆ. ಚಿಕ್ಕಮ್ಮ ವಿಷ್ಯವನ್ನು ಪೀಡಿತೆ ಸಹೋದರನಿಗೆ ಹೇಳಿದ್ದಾಳೆ. ಸಹೋದರ ಗ್ರಾಮಕ್ಕೆ ಬಂದು ಸಹಾಯ ಕೇಳಿದ್ದಾನೆ. ಶುಕ್ರವಾರ ಗ್ರಾಮಸ್ಥರು ಒಂದೆಡೆ ಸೇರಿದ್ದಾರೆ. ಪೀಡಿತೆಗೆ 80 ಸಾವಿರ ರೂಪಾಯಿ ನೀಡ್ತಾರೆ. ಪ್ರಕರಣ ಮುಚ್ಚಿಹಾಕು ಎಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಹೋದರನಿಗೆ ಗ್ರಾಮದಿಂದ ಹೊರ ಹೋಗದಂತೆ ಸೂಚನೆ ನೀಡಿದ್ದಾರೆ. ಹೇಗೋ ತಡರಾತ್ರಿ ಗ್ರಾಮದಿಂದ ಹೊರ ಬಂದ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...