alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಂಕೆ ಮರಿಗೆ ಎದೆಹಾಲು ಉಣಿಸ್ತಿದ್ದಾಳೆ ಈ ಮಹಾತಾಯಿ

ಮನುಷ್ಯರು ಮತ್ತು ಪ್ರಾಣಿಗಳ ನಡುವಣ ಸಂಘರ್ಷ ತಾರಕಕ್ಕೇರಿರುವ ಸಮಯ ಇದು. ಆದ್ರೆ ಈ ಫೋಟೋ ನೋಡಿದ್ರೆ ಇಬ್ಬರ ನಡುವಣ ಬಾಂಧವ್ಯ ಏನು ಅನ್ನೋದು ಅರ್ಥವಾಗುತ್ತದೆ. ಮಹಿಳೆಯೊಬ್ಳು ಜಿಂಕೆಮರಿಗೆ ಎದೆಹಾಲು ಉಣಿಸುತ್ತಿರುವ ಫೋಟೋವನ್ನು ಬಾಣಸಿಗ ವಿಕಾಸ್ ಖನ್ನಾ ಶೇರ್ ಮಾಡಿದ್ದಾರೆ. ಬಿಷ್ನೊಯ್ ಸಮುದಾಯಕ್ಕೆ ಸೇರಿದ ಮಹಿಳೆ ಈಕೆ.

ರಾಜಸ್ತಾನದ ಗ್ರಾಮವೊಂದರಲ್ಲಿ ಈ ಫೋಟೋ ಕ್ಲಿಕ್ಕಿಸಿದ್ದೇನೆ ಅಂತಾ ವಿಕಾಸ್ ಖನ್ನಾ ಪೋಸ್ಟ್ ಮಾಡಿದ್ದಾರೆ. ತಾಯಿಯನ್ನು ಕಳೆದುಕೊಂಡು ಅನಾಥವಾದ ಜಿಂಕೆ ಮರಿಗಳಿಗೆ ಅಲ್ಲಿನ ಮಹಿಳೆಯರೇ ಹಾಲೂಡಿಸುವ ಸಂಪ್ರದಾಯ ಬಹಳ ವರ್ಷಗಳಿಂದ್ಲೂ ಇದೆ. ತಮ್ಮದೇ ಮಕ್ಕಳಂತೆ ಜಿಂಕೆ ಮರಿಯನ್ನು ಸಲಹುತ್ತಾರೆ ಇಲ್ಲಿನ ಸ್ತ್ರೀಯರು.

ರಾಜಸ್ತಾನದ ಮರುಭೂಮಿಯಲ್ಲಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಎಷ್ಟೋ ಜಿಂಕೆ ಮರಿಗಳಿಗೆ ಈ ಮಹಿಳೆ ಆಸರೆಯಾಗಿದ್ದಾಳಂತೆ. ಅವುಗಳಿಗೆ ಎದೆಹಾಲು ಕುಡಿಸಿ ತನ್ನ ಸ್ವಂತ ಮಕ್ಕಳಂತೆ ಸಲಹಿದ್ದಾಳೆ. ಈ ಫೋಟೋಗೆ 31,000ಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾಮಾಜಿಕ ತಾಣಗಳಲ್ಲಿ ಈ ಮಹಿಳೆಯ ಸಹೃದಯತೆ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...