alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಗುಜರಾತ್ ಸಿಎಂ ಆಗಿ ವಿಜಯ್ ರೂಪಾನಿ ಪದಗ್ರಹಣ

ಗುಜರಾತ್ ನಲ್ಲಿ ವಿಜಯ್ ರೂಪಾನಿ ನೇತೃತ್ವದ ನೂತನ ಸರ್ಕಾರ ಅಧಿಕಾರ ಸ್ವೀಕರಿಸಿದೆ. ಗಾಂಧಿ ನಗರದಲ್ಲಿ ನಡೆದ ಸಮಾರಂಭದಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು ಸಮಾರಂಭಕ್ಕೆ ಸಾಕ್ಷಿಯಾದ್ರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿಯ 18 ಮುಖ್ಯಮಂತ್ರಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ರು. ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಪದಗ್ರಹಣ ಮಾಡಿದ್ದಾರೆ. ರೂಪಾನಿ ಸಂಪುಟದ 19 ಸಚಿವರುಗಳು ಕೂಡ ಪ್ರಮಾಣ ವಚನ ಮಾಡಿದ್ದಾರೆ.

11 ಸಚಿವರುಗಳಿಗೆ ಮತ್ತೊಮ್ಮೆ ಸಂಪುಟದಲ್ಲಿ ಚಾನ್ಸ್ ಸಿಕ್ಕಿದ್ದು, 9 ಹೊಸ ಮುಖಗಳು ಕ್ಯಾಬಿನೆಟ್ ಸೇರಿವೆ. 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಚಿವರುಗಳನ್ನು ಆಯ್ಕೆ ಮಾಡಲಾಗಿದೆ. ಮೋದಿ ಎರಡನೇ ಬಾರಿಗೆ ಪ್ರಧಾನಿ ಹುದ್ದೆ ಬಯಸಿ ಚುನಾವಣೆ ಎದುರಿಸಲಿದ್ದಾರೆ.

2014ರಲ್ಲಿ ಗುಜರಾತ್ ನ ಎಲ್ಲಾ 26 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. 61 ವರ್ಷದ ವಿಜಯ್ ರೂಪಾನಿ ಕ್ಲೀನ್ ಇಮೇಜ್ ಹೊಂದಿರೋದ್ರಿಂದ ಬಿಜೆಪಿ, ಮತ್ತೊಮ್ಮೆ ಅವರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...