alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಲ್ಯ ಸಾಲ ತೀರಿಸಲು ಬಿಕಿನಿ ಬೆಡಗಿಯರನ್ನು ಕೊಡಲಿ’

rgv

ಸಾಲದ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ವಿವಿಧ ಬ್ಯಾಂಕ್ ಗಳಿಂದ ಸುಮಾರು 9000 ಕೋಟಿ ರೂ. ಸಾಲ ಮಾಡಿದ ವಿಜಯ್ ಮಲ್ಯ ಸುಸ್ತಿದಾರರಾಗಿ ಲಂಡನ್ ನಲ್ಲಿ ನೆಲೆಸಿದ್ದಾರೆ.

ಮಲ್ಯ ದೇಶ ತೊರೆದಿರುವ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು, ವಿಜಯ ಮಲ್ಯರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಸುಮಾರು 9000 ಕೋಟಿ ಸಾಲ ಮಾಡಿ, ವಿದೇಶಕ್ಕೆ ಹೋಗಿರುವ ವಿಜಯ್ ಮಲ್ಯ, ಸಾಲ ಪಡೆದಿರುವ ಪ್ರತಿ ಬ್ಯಾಂಕ್ ಗಳಿಗೆ ಹಣ ನೀಡುವ ಬದಲಿಗೆ, ಬಿಕಿನಿ ತೊಟ್ಟ ಬೆಡಗಿಯರನ್ನು ಕೊಡಲಿ ಎಂದು ಹೇಳಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ಯಾಂಕ್ ಗಳಿಂದ ಸಾಲ ಪಡೆದ ಮಲ್ಯ, ಅದರ ಬದಲಿಗೆ ಬಿಕಿನಿ ಸುಂದರಿಯರನ್ನು ಬ್ಯಾಂಕ್ ಗಳಿಗೆ ಕೊಡಬಹುದು. ಆದರೆ, ಬ್ಯಾಂಕ್ ನವರು ಇದನ್ನು ಒಪ್ಪದಿರಬಹುದು. ಇಂತಹ ಪ್ರಸ್ತಾವನೆಯನ್ನು ಬ್ಯಾಂಕರ್ಸ್ ಗಳು ಒಪ್ಪದೇ ಇರಲಾರರು ಎಂದಿದ್ದಾರೆ. ಬ್ಯಾಂಕ್ ನಿಂದ ಹಣ ತಂದ ಮಲ್ಯ, ಕ್ಯಾಲೆಂಡರ್ ಗರ್ಲ್ ಗಳಿಗೆ ಕೊಟ್ಟಿದ್ದಾರೆ. ಈಗ ಉನ್ನತ ಸ್ಥಾನದಲ್ಲಿರುವ ಆ ಗರ್ಲ್ ಗಳು ಮಲ್ಯ ಅವರಿಗೆ ಸಹಾಯ ಮಾಡಬಾರದೇಕೆ ಎಂದು ವರ್ಮ ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...