alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯ್ ಮಲ್ಯ ಬಂಧನ ಸಾಧ್ಯತೆ..?

LONDON, ENGLAND - DECEMBER 12: Sahara Force India Team Principle Vijay Mallya welcomes Sergio Perez as their new driver on December 12, 2013 in London, England. (Photo by Scott Heavey/Getty Images)

ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಬರೋಬ್ಬರಿ 9000 ಕೋಟಿ ರೂ. ಸಾಲ ಕೊಡಬೇಕಿರುವ ಮಲ್ಯ ಹೇಗೋ ವಿದೇಶಕ್ಕೆ ಪಲಾಯನ ಮಾಡಿದ್ದರು. ಅಲ್ಲಿಂದಲೇ ಬ್ಯಾಂಕ್ ಗಳ ಸಾಲ ತೀರಿಸುತ್ತೇನೆ. 4000 ಕೋಟಿ ರೂ. ಸಾಲ ಪಾವತಿಸುತ್ತೇನೆ ಎಂದೆಲ್ಲಾ ಚೌಕಾಸಿ ಮಾಡಿದ್ದರು.

ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದು ಮಾಡಲಾಗಿದ್ದು, ಮಲ್ಯ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಇಡಿ ವತಿಯಿಂದ 3 ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಲ್ಯರ ಪಾಸ್ ಪೋರ್ಟ್ ರದ್ದು ಮಾಡಬೇಕೆಂದು ಜಾರಿ ನಿರ್ದೇಶನಾಲಯ ಮನವಿ ಮಾಡಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಪಾಸ್ ಪೋರ್ಟ್ ರದ್ದು ಮಾಡಿದೆ.

ರಾಜ್ಯಸಭೆ ಮೆಂಬರ್ ಆಗಿರುವ ವಿಜಯ್ ಮಲ್ಯ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿರುವುದರಿಂದ, ಪಾಸ್ ಪೋರ್ಟ್ ರದ್ದು ಮಾಡುವಂತೆ ಇಡಿ ಮನವಿ ಮಾಡಿತ್ತು. ಅದರಂತೆ ಪಾಸ್ ಪೋರ್ಟ್ ರದ್ದಾಗಿರುವುದರಿಂದ ಮಲ್ಯ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...