alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಿಂಗ್ ಫಿಷರ್’ ಬಿಲ್ಡಿಂಗ್ ಹರಾಜಿಗೆ

Vijay_Mallya

ನವದೆಹಲಿ: ಮದ್ಯದ ದೊರೆ, ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯ ಮತ್ತೇ ಸಂಕಷ್ಟದಲ್ಲಿದ್ದು, ಸಾಲದ ಸುಳಿಗೆ ಸಿಲುಕಿದ್ದಾರೆ. ತಮ್ಮ ಉದ್ಯಮಗಳಿಗೆ ಬ್ಯಾಂಕ್ ಗಳಿಂದ ಮಾಡಿದ ಸಾಲವನ್ನು ತೀರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ಸಾಲಕ್ಕಾಗಿ ಮುಂಬೈನಲ್ಲಿರುವ ಕಟ್ಟಡ ಹರಾಜಿಗೆ ಇಟ್ಟಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಒಕ್ಕೂಟ ಮುಂಬೈನಲ್ಲಿ ಇರುವ ಕಿಂಗ್ ಫಿಷರ್ ಏರ್ ಲೈನ್ಸ್ ಕಟ್ಟಡವನ್ನು ಮಾರ್ಚ್ 17 ರಂದು ಹರಾಜು ಮಾಡಲಿದೆ. ಕಿಂಗ್ ಫಿಷರ್ ಏರ್ ಲೈನ್ಸ್ ನಿಂದ ಬರೋಬ್ಬರಿ 6,963 ಕೋಟಿ ರೂ. ಸಾಲ ಬರಬೇಕಿದ್ದು, ಅದನ್ನು ವಸೂಲಿ ಮಾಡುವ ಉದ್ದೇಶದಿಂದ ಹರಾಜು ಪ್ರಕ್ರಿಯೆಗೆ ಮುಂದಾಗಿದೆ. ಸುಮಾರು 2,401 ಚದರ ಅಡಿ ವಿಸ್ತೀರ್ಣದ ಈ ಕಟ್ಟಡವನ್ನು ಸ್ಟೇಟ್ ಬ್ಯಾಂಕ್ ಒಕ್ಕೂಟ ಕಳೆದ ವರ್ಷ ತನ್ನ ವಶಕ್ಕೆ ಪಡೆದುಕೊಂಡಿತ್ತು.

ವಿಜಯ್ ಮಲ್ಯ ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಸ್ಟೇಟ್ ಬ್ಯಾಂಕ್ ನಿಂದ ಪಡೆದ ಸಾಲ ಹಿಂತಿರುಗಿಸದೇ ಸುಸ್ತಿದಾರರಾಗಿದ್ದರು. ಸುಸ್ತಿ ಸಾಲವನ್ನು ವಸೂಲಿ ಮಾಡಲು ಕೋರ್ಟ್ ಮೊರೆ ಹೋಗಿದ್ದ ಸ್ಟೇಟ್ ಬ್ಯಾಂಕ್ ಒಕ್ಕೂಟ ಮುಂದಿನ ತಿಂಗಳು ಹರಾಜು ನಡೆಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...