alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ಎಲ್ಲ ಸಾಲ ತೀರಿಸ್ತೇನೆ, ಪ್ಲೀಸ್ ಒಪ್ಪಿಕೊಳ್ಳಿ ಎಂದ ವಿಜಯ್ ಮಲ್ಯ

ಭಾರತೀಯ ಬ್ಯಾಂಕ್ ನಲ್ಲಿ ಸಾಲ ಮಾಡಿ ಬ್ರಿಟನ್ ಗೆ ಓಡಿ ಹೋಗಿರುವ ಮದ್ಯದ ದೊರೆ ಮಲ್ಯಗೆ ಭಯ ಶುರುವಾಗಿದೆ. ಹಾಗಾಗಿ ಹೊಸ ರಾಗ ಹಾಡಿದ್ದಾರೆ. ಬ್ಯಾಂಕ್ ನ ಎಲ್ಲ ಸಾಲ ತೀರಿಸಲು ಸಿದ್ಧನಿದ್ದೇನೆ. ತನ್ನ ಆಫರ್ ಒಪ್ಪಿಕೊಳ್ಳಿ ಎಂದು ಬ್ಯಾಂಕ್ ಗಳಿಗೆ ಮಲ್ಯ ಹೇಳಿದ್ದಾರೆ. ಟ್ವೀಟರ್ ಮೂಲಕ ಮಲ್ಯ ಈ ವಿಷ್ಯವನ್ನು ತಿಳಿಸಿದ್ದಾರೆ.

ಯುಪಿಎ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಡೀಲ್ ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ನನ್ನು ದುಬೈ ಕೋರ್ಟ್ ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ ಮಲ್ಯ ಈ ಟ್ವಿಟ್ ಮಾಡಿದ್ದಾರೆ. ಭಾರತ ಸರ್ಕಾರ, ಭಾರತೀಯ ಬ್ಯಾಂಕ್ ಗಳಿಗೆ ಮೋಸ ಮಾಡಿದ್ದ ಮಲ್ಯ, ನೀರವ್ ಮೋದಿಯನ್ನು ಆರ್ಥಿಕ ಅಪರಾಧಿಗಳೆಂದು ಘೋಷಣೆ ಮಾಡಿ ತನ್ನ ವಶಕ್ಕೆ ಪಡೆಯಲು ಪ್ರಯತ್ನ ನಡೆಸುತ್ತಿದೆ. ಇದು ವಿಜಯ್ ಮಲ್ಯ ಭಯಕ್ಕೆ ಕಾರಣವಾಗಿದೆ.

ಬ್ಯಾಂಕ್ ಸಾಲ ತೀರಿಸುವುದಾಗಿ ಟ್ವಿಟ್ ಮಾಡಿರುವ ಮಲ್ಯ, ಕಳೆದ ಮೂರು ದಶಕಗಳಿಂದ ಮದ್ಯದ ಅತಿ ದೊಡ್ಡ ಕಂಪನಿಯಾಗಿ ಕಿಂಗ್ ಫಿಶರ್ ಭಾರತದಲ್ಲಿ ವ್ಯವಹಾರ ನಡೆಸುತ್ತಿದೆ. ಕಿಂಗ್ ಫಿಶರ್ ನಿಂದ ರಾಜ್ಯದ ಖಜಾನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಸಹಾಯವಾಗಿದೆ. ಕಿಂಗ್ ಫಿಶರ್ ಏರ್ಲೈನ್ಸ್ ಕೂಡ ಸರ್ಕಾರಕ್ಕೆ ಸಾಕಷ್ಟು ಹಣ ನೀಡಿದೆ. ಆದ್ರೆ ವಿಮಾನ ಕಂಪನಿ ಮುಚ್ಚಲ್ಪಟ್ಟಿದೆ. ಆದ್ರೂ ನಾನು ಬ್ಯಾಂಕ್ ಸಾಲ ತೀರಿಸಲು ಬಯಸುತ್ತೇನೆ. ದಯವಿಟ್ಟು ಇದನ್ನು ಸ್ವೀಕರಿಸಿ ಎಂದು ಮಲ್ಯ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...