alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ತೀರಿಸ್ತೇನೆಂದ ಮಲ್ಯ ಇನ್ನೊಂದು ಟ್ವೀಟ್

ಮದ್ಯದ ದೊರೆ ವಿಜಯ್ ಮಲ್ಯ ಗುರುವಾರ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಬುಧವಾರ ಟ್ವೀಟ್ ಮಾಡಿದ್ದ ಮಲ್ಯ, ಭಾರತೀಯ ಬ್ಯಾಂಕ್ ನಲ್ಲಿ ಪಡೆದ ಎಲ್ಲ ಸಾಲಗಳನ್ನು ವಾಪಸ್ ಮಾಡುವುದಾಗಿಯೂ, ಅದನ್ನು ಬ್ಯಾಂಕ್ ಸ್ವೀಕರಿಸಬೇಕೆಂದು ಹೇಳಿದ್ದರು. ಗುರುವಾರ ಇನ್ನೊಂದು ಭಾವುಕ ಟ್ವೀಟ್ ಮಾಡಿದ್ದಾರೆ.

ತಾನು ನೀಡುವ ಹಣವನ್ನು ಬ್ಯಾಂಕ್ ಗಳು ವಾಪಸ್ ಪಡೆಯಲಿ. ಹಾಗೆ ಸಾಲ ತೀರಿಸದೆ ಓಡಿ ಹೋದ ಎಂಬ ಆರೋಪ ಮಾಡಬೇಡಿ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ಬ್ರಿಟಿಷ್ ನ್ಯಾಯಾಲಯದಲ್ಲಿ ಮಲ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. 9 ಸಾವಿರ ಕೋಟಿ ಸಾಲ ಮಾಡಿರುವ ಮಲ್ಯರನ್ನು ಭಾರತದ ವಶಕ್ಕೆ ನೀಡುವಂತೆ ಭಾರತ ಸರ್ಕಾರ, ಬ್ರಿಟಿಷ್ ಸರ್ಕಾರವನ್ನು ಕೋರಿದೆ. ಈ ಸಂಬಂಧ ಪ್ರಯತ್ನ ನಡೆಯುತ್ತಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಡೀಲ್ ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ನನ್ನು ದುಬೈ ಕೋರ್ಟ್ ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ ಬುಧವಾರ ಬೆಳ್ಳಿಗೆ ಮಲ್ಯ ಒಂದಾದ ಮೇಲೊಂದರಂತೆ ಎರಡು ಟ್ವೀಟ್ ಮಾಡಿದ್ದರು. ಕಿಂಗ್ ಫಿಶರ್ ಮದ್ಯದಿಂದ ಅನೇಕ ರಾಜ್ಯಗಳ ಬೊಕ್ಕಸ ತುಂಬಿದೆ. ಕಿಂಗ್ ಫಿಶರ್ ವಿಮಾನ ರದ್ದಾಗಿದ್ದರಿಂದ ತೊಂದರೆಯಾಯ್ತು. ಸಾಲ ತೀರಿಸುತ್ತೇನೆ. ಸ್ವೀಕರಿಸಿ ಎಂದು ಮಲ್ಯ ಟ್ವೀಟ್ ಮಾಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...