alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಡಿಸಿನ್ ಕಂಪೆನಿಯಿಂದಲೂ ಮಲ್ಯ ಹೊರಕ್ಕೆ !

VijayMallyajpg-kLcD--621x414@LiveMint

ಸಾಲದ ಸುಳಿಯಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಇದೀಗ 23 ವರ್ಷಗಳ ಬಳಿಕ ಪ್ರಮುಖ ಔಷಧ ಸಂಸ್ಥೆಯಾಗಿರುವ ಸನೋಫಿ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಆ ಮೂಲಕ ಮತ್ತೊಂದು ಹಿನ್ನಡೆ ಅನುಭವಿಸಿದಂತಾಗಿದೆ.

ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಎಂಬ ಅಂದಿನ ಹೆಸರಿನ ಈ ಕಂಪನಿಗೆ 1973 ರಲ್ಲಿ ಮೊತ್ತ ಮೊದಲ ಬಾರಿಗೆ ನಿರ್ದೇಶಕರಾಗಿ ಸೇರ್ಪಡೆಯಾಗಿದ್ದ ಮಲ್ಯ, ಬದಲಾದ ಎಸ್ ​ಐ ಎಲ್ ಎಂಬ ಹೆಸರಿನ ಈ ಕಂಪನಿಗೆ 1983 ರ ಡಿಸೆಂಬರ್ ​ನಿಂದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಆದರೆ ಈಗಾಗಲೇ ಸಾಲದ ಸುಳಿಯಿಂದ ಹೊರಬರಲು ಹರಸಾಹಸಪಡುತ್ತಿರುವ ಮಲ್ಯ ಅವರು ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರಾಗಿ ಪುನರಾಯ್ಕೆ ಕೋರದೇ ಇರುವ ಬಗೆಗಿನ ತಮ್ಮ ನಿರ್ಧಾರವನ್ನು ಕಂಪೆನಿಗೆ ತಿಳಿಸಿದ್ದಾರೆ ಎನ್ನಲಾಗಿದ್ದು, ಆ ಮೂಲಕ ಎಸ್ ​ಐ ಎಲ್ ಕಂಪನಿಯಿಂದ ಸಹ ಹೊರ ಬಂದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...