alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತಕ್ಕೆ ಕಾರಣವಾದ ಮಹಿಳೆ ಮಾಡಿದ್ದು ಅಮಾನವೀಯ ಕೆಲಸ!

accident

ಅತ್ಯಂತ ವೇಗದ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದ ಪ್ರತಿನಿತ್ಯ ಭಾರತದಲ್ಲಿ ಹಲವರು ಪ್ರಾಣ ಕಳೆದುಕೊಳ್ತಾರೆ. ಅಪಘಾತ ಮಾಡಿ ಎಸ್ಕೇಪ್ ಆಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಸಾರ್ವಜನಿಕರು ನೆರವು ನೀಡುವ ಬದಲು ಫೋಟೋ ತೆಗೆದ ಅದೆಷ್ಟೋ ಉದಾಹರಣೆಗಳಿವೆ.

ಹೈದ್ರಾಬಾದ್ ನಲ್ಲಿ ಮಹಿಳೆಯೊಬ್ಬಳ ಅಮಾನವೀಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಹನಗಳು ವೇಗವಾಗಿ ಬರ್ತಾ ಇದ್ರೂ ಲೆಕ್ಕಿಸದೇ ಮಹಿಳೆಯೊಬ್ಳು ನಡುರಸ್ತೆಯಲ್ಲಿ ಸರಸರನೆ ನಡೆದುಬಂದಿದ್ದಾಳೆ. ಆಕೆಗೆ ಇನ್ನೇನು ಆಟೋ ಗುದ್ದಿಯೇ ಬಿಡ್ತಿತ್ತು, ಅದನ್ನು ತಪ್ಪಿಸಲು ಹೋಗಿ ಚಾಲಕ ಆಟೋವನ್ನು ಪಕ್ಕಕ್ಕೆ ಟರ್ನ್ ಮಾಡಿದ್ದಾನೆ. ಆಗ ಆಟೋ ಬೈಕ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಬೈಕ್ ಕೂಡ ಸ್ವಲ್ಪ ದೂರ ಹೋಗಿಬಿದ್ದಿದ್ದು, ಸವಾರನೂ ರಸ್ತೆ ಮೇಲೆ ಬಿದ್ದಿದ್ದಾನೆ. ಇಷ್ಟೆಲ್ಲ ಆಗಿದ್ದು ಆ ಮಹಿಳೆಯಿಂದ, ತನ್ನಿಂದ್ಲೇ ಅಪಘಾತ ನಡೆದಿರೋದನ್ನು ಗಮನಿಸಿಯೂ ಮಹಿಳೆ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಹೊರಟೇ ಹೋಗಿದ್ದಾಳೆ. ಅಪಘಾತದಲ್ಲಿ ಯಾರಾದ್ರೂ ಗಾಯಗೊಂಡಿದ್ದಾರಾ ಅನ್ನೋದನ್ನೂ ವಿಚಾರಿಸುವ ಸೌಜನ್ಯ ತೋರದೆ ಅಲ್ಲಿಂದ ತೆರಳಿರುವ ಮಹಿಳೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಾ ಇದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...