alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶ ರೈಲು ನಿಲ್ದಾಣದಲ್ಲಿ ನಡೆದಿದೆ ಇಂಥಾ ಪವಾಡ..!

ಇದನ್ನು ನೀವು ಅದೃಷ್ಟ ಎಂದಾದ್ರೂ ಕರೆಯಬಹುದು ಅಥವಾ ಚಮತ್ಕಾರ ಎನ್ನಬಹುದು. ಉತ್ತರ ಪ್ರದೇಶದ ಡೋರಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಸಾವನ್ನೇ ಗೆದ್ದು ಬಂದಿದ್ದಾನೆ. ಚಲಿಸುತ್ತಿರುವ ರೈಲು ಮೈಮೇಲೆ ಹರಿದ್ರೂ ಬಚಾವ್ ಆಗಿದ್ದಾನೆ.

ಚಲಿಸ್ತಾ ಇದ್ದ ರೈಲು ಏರಲು ಆತ ಒಂದು ಕಾಲನ್ನು ಸೇತುವೆ ಮೇಲಿಟ್ಟುಕೊಂಡು ನಿಂತಿದ್ದ. ಬ್ಯಾಲೆನ್ಸ್ ಸಿಗದೇ ಹಳಿಗಳ ಮೇಲೆ ಬಿದ್ದಿದ್ದಾನೆ. ವೇಗವಾಗಿ ಬಂದ ಗೂಡ್ಸ್ ರೈಲು ಅವನ ಮೈಮೇಲೆ ಹರಿದಿದೆ. ಸುತ್ತಲೂ ಇದ್ದ ಜನರೆಲ್ಲ ಅವನ ಕಥೆ ಮುಗಿದೇ ಹೋಯ್ತು ಎಂದುಕೊಂಡಿದ್ರು.

ಆದ್ರೆ ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ ಆತ ಆರಾಮಾಗಿ ಮೇಲಕ್ಕೆದ್ದು ಬಂದಿದ್ದಾನೆ. ಹಳಿಗಳ ಮೇಲೆ ನೇರವಾಗಿ ಮಲಗಿದ್ದರಿಂದ ಅವನಿಗೆ ಯಾವುದೇ ಅಪಾಯವಾಗಿಲ್ಲ. ನವೆಂಬರ್ 15ರಂದು ನಡೆದಿರೋ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...