alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ರು, ಕಾರಣ ನೀವೇ ನೋಡಿ….

ಮದುವೆ ಎಂದರೆ ನೆನಪಿಗೆ ಬರುವುದೇ ಸಂಭ್ರಮ, ನಲಿವು, ಸಂತೋಷದ ಕ್ಷಣಗಳು. ಆದರೂ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಂದ ಸಂಭ್ರಮ ಮರೆಯಾಗಿ ಬಿಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮದುವೆಯ ವಿಡಿಯೋವೊಂದು ಬೆಚ್ಚಿ ಬೀಳಿಸುವಂತಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಮದುವೆಗಳು ಸಾಮಾನ್ಯವಾಗಿ ಮನೆ ಬಾಗಿಲಲ್ಲೇ ನಡೆಯುತ್ತವೆ. ಶಾಮಿಯಾನ ಹಾಕಿಕೊಂಡು ಬಯಲಲ್ಲೇ ಅಡುಗೆ ಮಾಡುತ್ತಾರೆ. ಸಮಿಪದಲ್ಲೇ ಮದುವೆಯ ಸಮಾರಂಭ ನಡೆಯುತ್ತದೆ. ಇದೇ ರೀತಿಯ ಮದುವೆ ನಡೆಯುವ ಸ್ಥಳದಲ್ಲಿ ಹುಲಿ ಪ್ರತ್ಯಕ್ಷವಾದರೆ ಹೇಗಿರಬೇಡ.

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಮದುವೆಯ ಸ್ಥಳದಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಮೂಡಿಸಿದ್ದು, ಮದುವೆಗೆ ಬಂದವರೆಲ್ಲಾ ಪರಾರಿಯಾಗಿದ್ದಾರೆ. ಮದುವೆ ವಿಡಿಯೋ ತೆಗೆಯಲು ಬಂದ ಛಾಯಾಗ್ರಾಹಕ ಮರೆಯಲ್ಲಿ ನಿಂತು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಪೊದೆಯೊಳಗಿಂದ ಅಡುಗೆ ಮಾಡುವ ಸ್ಥಳಕ್ಕೆ ನುಗ್ಗುವ ಹುಲಿ ಮದುವೆಗೆ ಹಾಕಿದ್ದ ಶಾಮಿಯಾನದ ಸುತ್ತಲೂ ಓಡಾಡಿ ಮುಂದೆ ಸಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...