alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಸರಗಳ್ಳನ ಭರ್ಜರಿ ಸ್ಟೆಪ್ಸ್

thief

ರಿಂಕು ಭದೋರಿಯಾ ಉತ್ತರಪ್ರದೇಶದ ಝಾನ್ಸಿಯವನು. ಕುಖ್ಯಾತ ಸರಗಳ್ಳ. ಇತ್ತೀಚೆಗೆ ರಿಂಕು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಹೇಗಾದ್ರೂ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಅನ್ನೋದು ಅವನ ಪ್ಲಾನ್. ಪೊಲೀಸರನ್ನು ಯಾಮಾರಿಸಲು ವಿಚಿತ್ರ ಸ್ಟಂಟ್ ಮಾಡಿದ್ದಾನೆ.

ತಾನು ಕಳ್ಳನಲ್ಲ, ಅಮಾಯಕ. ನಾನೊಬ್ಬ ವೃತ್ತಿಪರ ಡಾನ್ಸರ್ ಅಂತಾ ಪೊಲೀಸರ ಮುಂದೆ ರಿಂಕು ಹೇಳಿಕೊಂಡಿದ್ದ. ಹಾಗಾದ್ರೆ ಡಾನ್ಸ್ ಮಾಡು ನೋಡೋಣ ಎಂದ್ರು ಪೊಲೀಸರು. ಕೂಡಲೇ ರಿಂಕು ನಡು ರಸ್ತೆಯಲ್ಲೇ ಸ್ಟೆಪ್ ಹಾಕಿದ್ದಾನೆ.

ಪೊಲೀಸರು ಕೂಡ ಅವನ ಡಾನ್ಸ್ ನೋಡಿ ಬೆರಗಾದ್ರು. ಮೈಕೆಲ್ ಜಾಕ್ಸನ್ ಸ್ಟೆಪ್ಸ್ ಮಾಡು ಅಂತೆಲ್ಲಾ ಹೇಳಿ ಮಜಾ ತಗೊಂಡ್ರು. ಪೊಲೀಸರಿಂದ ಪಾರಾಗಬೇಕು ಅನ್ನೋ ಕಸರತ್ತಿನಲ್ಲಿ ಕಳ್ಳ ರಿಂಕು ಭರ್ಜರಿಯಾಗೇ ಡಾನ್ಸ್ ಮಾಡಿದ್ದಾನೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...